ಬೆಳ್ತಂಗಡಿ : ವೇಣೂರು ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನೈನಾಡು ಸಮೀಪದ ನೀನ್ಯಾಲು ರಬ್ಬರ್ ತೋಟದಲ್ಲಿ ಸುಮಾರು 1 ವರ್ಷದಿಂದ 1.5 ವರ್ಷದ ಹೆಣ್ಣು ಚಿರತೆಯೊಂದು ಸೆರೆಯಾದ ಬಗ್ಗೆ ಜ.15 ರಂದು ವರದಿಯಾಗಿದೆ.
ಚಿರತೆ ಅರೆಪ್ರಜ್ಞೆ ಸ್ಥಿತಿಯಲ್ಲಿ ನಿನ್ಯಾಲು ಪರಿಸರದ ಖಾಸಗಿ ಜಮೀನಿನ ರಬ್ಬರ್ ತೋಟದಲ್ಲಿ ಪತ್ತೆಯಾಗಿದೆ. ಎಲ್ಲಿಂದಲೋ ಉರುಳಿಗೆ ಬಿದ್ದಿದ್ದ ಚಿರತೆ ಅರಪ್ರಜ್ಞಾ ಸ್ಥಿತಿಯಲ್ಲಿ ಅಲ್ಲಿ ಬಿದ್ದಿದೆ.ಮಂಗಳೂರು ವೃತ್ತದ ವನ್ಯಜೀವಿ ಪಶುವೈದ್ಯ ಡಾ.ಯಶಸ್ವಿ ನಾರಾವಿ ಆಗಮಿಸಿ ಅರವಳಿಕೆ ಮದ್ದು ನೀಡಿ ಸಿಕ್ಕಿಹಾಕಿಕೊಂಡಿದ ಉರುಳನ್ನು ತೆಗೆದು ಬೋನಿಗೆ ಹಾಕಿ ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಮೂಡಬಿದರೆ ಎಸಿಎಫ್ ಶ್ರೀಧರ್.ಪಿ ಮಾರ್ಗದರ್ಶನದಲ್ಲಿ ವೇಣೂರು ವಲಯ ಅರಣ್ಯಾಧಿಕಾರಿ ಭರತ್.ಯು.ಜಿ ನೇತೃತ್ವದ ಡಿ.ಆರ್.ಡಿ.ಒ ಅಶ್ವಿತ್ ಗಟ್ಟಿ ಮತ್ತು ಸುನಿಲ್ ಕುಮಾರ್, ಗಸ್ತು ಅರಣ್ಯ ಪಾಲಕ ಸುರೇಶ್ ಮತ್ತು ದಿವಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.


