ಬೆಳ್ತಂಗಡಿ : ಸರಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಿ ಕಾನೂನು ಬಾಹಿರವಾಗಿ ಯಾವುದೇ ಅನುಮತಿಗಳನ್ನು ಪಡೆಯದೆ ಅನಧಿಕೃತವಾಗಿ ವೇಣೂರಿನಲ್ಲಿ ಬೃಹತ್ ಖಾಸಗಿ ಶಾಲೆಯ ಕಟ್ಟಡ ನಿರ್ಮಾಣ ಮಾಡುತ್ತಿರುವ ಕಾಮಗಾರಿಗೆ ಕೊನೆಗೂ ಎಚ್ಚೆತ್ತುಕೊಂಡ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಇದು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವರದಿಯ ಬಿಗ್ ಇಂಪ್ಯಾಕ್ಟ್.

ಅನಧಿಕೃತ ಕಟ್ಟಡ ಕಾಮಗಾರಿಯ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಜ.13 ರಂದು “ಮಾಹಿತಿ ಇದ್ದರೂ ಕಣ್ಣುಮುಚ್ಚಿ ಕುಳಿತ ಅಧಿಕಾರಿ ವರ್ಗ” ಎಂಬ ಶೀರ್ಷಿಕೆಯಡಿಯಲ್ಲಿ ಬ್ರೈಟ್ ಹಾರಿಜೋನ್ ಇಂಟರ್ ನ್ಯಾಷನಲ್ ಸ್ಕೂಲ್/ ಬೆಸ್ಟ್ ವಸತಿ ಶಾಲೆ ಎಂಬ ಹೆಸರಿನಲ್ಲಿ ಅನಧಿಕೃತ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೂ ನಿದ್ದೆ ಮಾಡುತ್ತಿರುವ ಅಧಿಕಾರಿಗಳು. ನಿದ್ದೆಯಿಂದ ಎದ್ದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರ ಅಗ್ರಹವಾಗಿದೆ’ ಎಂಬ ವರದಿ ಭಿತ್ತರಿಸಿ ಅಧಿಕಾರಿಗಳನ್ನು ಎಚ್ಚರಿಸಿತ್ತು.

ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ನೇತೃತ್ವದಲ್ಲಿ ವೇಣೂರು ಗ್ರಾಮದ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ತಂಡದ ಅಧಿಕಾರಿಗಳು ಜ.14 ರಂದು ಸರ್ವೆ ನಂಬರ್ 125/2A,125/2B2,155/1C2,155/1B ರಲ್ಲಿ ಬ್ರೈಟ್ ಹಾರಿಜೋನ್ ಇಂಟರ್ ನ್ಯಾಷನಲ್ ಸ್ಕೂಲ್ / ಬೆಸ್ಟ್ ವಸತಿ ಶಾಲೆಯ ಅನಧಿಕೃತ ಕಟ್ಟಡದ ಕಾಮಗಾರಿಯನ್ನು ನಿಲ್ಲಿಸಿ ಸಕ್ಷಮ ಪ್ರಾಧಿಕಾರದಿಂದ ಎಚ್ಚರಿಕೆ ಟೇಪ್ ಅಳವಡಿಸಿ ಕಾಮಗಾರಿ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಿ ಸ್ಥಗಿತಗೊಳಿಸಲಾಗಿದೆ.ಇದನ್ನು ಉಲ್ಲಂಘಿಸಿ ಕಾಮಗಾರಿಯನ್ನು ಪುನರ್ ಆರಂಭಿಸಿದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕಾರ ಹಾಗೂ ಅಕ್ರಮ ಕಟ್ಟಡಗಳನ್ನು ನಿರ್ಬಂಧಿಸುವ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ಮತ್ತು ಕರ್ನಾಟಕ ಸರಕಾರ ಸುತ್ತೋಲೆ ಸಂಖ್ಯೆ ಆರ್.ಡಿ.ಪಿ.ಆರ್ /27/ಜಿಪಿಎ 2025 ದಿನಾಂಕ 13-05-2025 ರಂತೆ ಕಾನೂನು ಕ್ರಮವನ್ನು ಸಂಬಂಧಪಟ್ಟರವ ಮೇಲೆ ಜರುಗಿಸಲಾಗುವುದು ಎಂದು ಎಚ್ಚರಿಕೆ ಬ್ಯಾನರ್ ಹಾಕಲಾಗಿದೆ.

ಬೆಳ್ತಂಗಡಿ ತಾಲೂಕಿನ ವೇಣೂರು, ಕರಿಮಣೇಲು ಗ್ರಾಮದಲ್ಲಿ ಮೂಡಬಿದಿರೆಯ ನಿವಾಸಿ ಡಾ.ಶರತ್ ಗೋರೆ ಎಂಬವರ ಮಾಲೀಕತ್ವದ “ಬ್ರೈಟ್ ಹಾರಿಜೋನ್ ಇಂಟರ್ ನ್ಯಾಷನಲ್ ಸ್ಕೂಲ್/ಬೆಸ್ಟ್ ವಸತಿ ಶಾಲೆ ಎಂಬ ಹೆಸರಿನಲ್ಲಿ ಅನಧಿಕೃತವಾಗಿ ಬೃಹತ್ ಮಹಡಿಯನ್ನು ನಿರ್ಮಾಣ ಕಾಮಗಾರಿ ಕೆಲಸ ಮಾಡುತ್ತಿದ್ದರು.ಈ ಅಕ್ರಮ ಕಟ್ಟಡ ಕಾಮಗಾರಿಯ ಮಾಡುತ್ತಿರುವ ಬಗ್ಗೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ವೇಣೂರು ಅಭಿವೃದ್ಧಿ ಅಧಿಕಾರಿಗಳಿಗೆ ಜ.12 ರಂದು ಲಿಖಿತ ಪತ್ರದ ಮೂಲಕ ದೂರು ಸಲ್ಲಿಸಿದ್ದರು. ಆದ್ರೆ ಈ ಬಗ್ಗೆ ಅಧಿಕಾರಿಗಳು ಕ್ಯಾರೆ ಮಾಡಿರಲ್ಲಿಲ್ಲ, ಈ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವರದಿಯನ್ನು ಬಿತ್ತರಿಸಿ ಅಧಿಕಾರಿಗಳನ್ನು ಎಚ್ಚರಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮಾಡಿದೆ.


