Friday, June 26, 2026
Homeಕರಾವಳಿಮಂಗಳೂರಿನಲ್ಲಿ ಜ.9ರಿಂದ 11ರವರೆಗೆ ಹಕ್ಕಿಹಬ್ಬ

ಮಂಗಳೂರಿನಲ್ಲಿ ಜ.9ರಿಂದ 11ರವರೆಗೆ ಹಕ್ಕಿಹಬ್ಬ

- Advertisement -
- Advertisement -

ಮಂಗಳೂರು: ಜ.9ರಿಂದ 11ರವರೆಗೆ ಮಂಗಳೂರಿನಲ್ಲಿ 12ನೇ ಆವೃತ್ತಿಯ ‘ಹಕ್ಕಿ ಹಬ್ಬ’ವನ್ನು(ಬರ್ಡ್ ಫೆಸ್ಟಿವಲ್) ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದೆ.

ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ, ಯುವಜನರಲ್ಲಿ ವಿವಿಧ ಪಕ್ಷಿ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿದೆ. ಈ ವರ್ಷದ ಉತ್ಸವದ ಉದ್ಘಾಟನೆಯು ಪಿಲಿಕುಲದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆಯಲಿದೆ. ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಈ ವರ್ಷದ ಹಕ್ಕಿ ಹಬ್ಬದ ಲಾಂಛನ ಜಿಲ್ಲೆಯ ಕರಾವಳಿಯಲ್ಲಿ ಕಂಡುಬರುವ ‘ಬಿಳಿ ಹೊಟ್ಟೆಯ ಕಡಲ ಹದ್ದು’ ಆಗಿರುತ್ತದೆ ಎಂದು ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

- Advertisement -

Latest News

error: Content is protected !!