- Advertisement -


- Advertisement -
ಮಂಡ್ಯ: ತಿಥಿ ಸಿನಿಮಾ ಖ್ಯಾತಿಯ ಸೆಂಚೂರಿ ಗೌಡ ನಿಧನರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಗ್ರೇಗೌಡ ಅಲಿಯಾಸ್ ಸೆಂಚೂರಿ ಗೌಡ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೇಗೌಡನ ಕೊಪ್ಪಲು ಗ್ರಾಮದ ನಿವಾಸಿಯಾಗಿದ್ದರು.
ತಿಥಿ ಸಿನಿಮಾದಲ್ಲಿ ನಟಿಸಿದ್ದ ಸಿಂಗ್ರೇಗೌಡ ಸೆಂಚೂರಿ ಗೌಡ ಎಂದು ಖ್ಯಾತಿ ಪಡೆದಿದ್ದರು. ಅವರ ವಯಸ್ಸು ನೂರು ವರ್ಷ ವಯಸ್ಸು ದಾಟಿದ್ದರಿಂದ ಸಿನಿಮಾದಲ್ಲಿ ಕೂಡಾ ಪಾತ್ರದ ಹೆಸರು ಸೆಂಚೂರಿ ಗೌಡ ಎಂದಾಗಿತ್ತು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೆಂಚೂರಿ ಗೌಡ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಕಳೆದ ತಿಂಗಳು ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನ ಹೊಂದಿದ್ದರು.
- Advertisement -


