Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಬೋಳದ ಬೈಲು ಮಸೀದಿ ಅಧ್ಯಕ್ಷರಾಗಿ ಶರೀಫ್ ಅಲ್ಫಾ ಆಯ್ಕೆ

ಬೆಳ್ತಂಗಡಿ : ಬೋಳದ ಬೈಲು ಮಸೀದಿ ಅಧ್ಯಕ್ಷರಾಗಿ ಶರೀಫ್ ಅಲ್ಫಾ ಆಯ್ಕೆ

- Advertisement -
- Advertisement -

ಬೆಳ್ತಂಗಡಿ : ಕೊಕ್ಕಡ ಗ್ರಾಮದ ರಿಫಾಯಿಯ್ಯ ಸುನ್ನಿ ಜುಮ್ಮಾ ಮಸ್ಜಿದ್ ಬದ್ರಿಯಾ ನಗರ ಬೋಳದಬೈಲು ಇದರ ವಾರ್ಷಿಕ ಮಹಾ ಸಭೆಯು ಜ.2 ರಂದು ನಡೆಯಿತು.26-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಲ್ಫಾ ಟ್ರೇಡರ್ಸ್ ಮಾಲಕರಾದ ಶರೀಫ್ ಅವರು ಆಯ್ಕೆಯಾಗಿದ್ದಾರೆ.

ಹಿಂದೆ ನಾಲ್ಕು ಅವಧಿಗೆ ಮಸೀದಿ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದ ಶರೀಫ್ ಅವರು ಇದೀಗ ಸತತ ಐದನೇ ಬಾರಿ ಆಯ್ಕೆಯಾಗುವ ಮೂಲಕ ಜಮಾಅತ್ ಬಾಂಧವರ ಪಾಲಿಗೆ ಮತ್ತೊಮ್ಮೆ ಆಶಾಕಿರಣವಾಗಿ ಮೂಡಿ ಬಂದಿದ್ದಾರೆ.ಸಾಮಾಜಿಕ ಚಿಂತನೆಯ ಶರೀಫ್ ಅವರು ಸರ್ವಜನ ಬಾಂಧವರ ಮನಗೆದ್ದ ಒಬ್ಬ ಯಶಸ್ವೀ ನಾಯಕ ! ತನ್ನ ಉದ್ಯಮದಲ್ಲಿ ನಿಷ್ಠೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಜನಪರ ಸೇವೆ ನೀಡುವ ಮಾದರೀ ವ್ಯಕ್ತಿಯಾಗಿ ಅವರು ಜನಪ್ರಿಯತೆ ಗಳಿಸಿದ್ದಾರೆ.

ಬೋಳದ ಬೈಲು ಮಸೀದಿಯ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಶ್ರಮಿಸಿದ್ದ ಶರೀಫ್ ಅವರು ಐದನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅವರ ಪ್ರಾಮಾಣಿಕತೆಗೆ ಸಂದ ಗೌರವವಾಗಿದೆ.

- Advertisement -

Latest News

error: Content is protected !!