- Advertisement -
![]()
- Advertisement -
ಉಡುಪಿ: ಕಾಪು ತಾಲೂಕಿನ ಹೆಜಮಾಡಿ ಸಮುದ್ರ ತೀರದಲ್ಲಿ ಬೂತಾಯಿ ಮೀನುಗಳ ರಾಶಿ ಕಂಡು ಬಂದಿದೆ.
ಸಮುದ್ರದ ತೀರ ಪ್ರದೇಶಕ್ಕೆ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಲಕ್ಷಾಂತರ ಬೂತಾಯಿ ಮೀನುಗಳು ಜಿಗಿದಿವೆ.
ಸಮುದ್ರ ತೀರದ ನಿವಾಸಿಗಳು ಮೀನಿನ ರಾಶಿಯನ್ನು ಕಂಡು ಖುಷಿಯಾಗಿದ್ದು, ಕೈಗೆ ಸಿಕ್ಕಿದಷ್ಟು ಮೀನುಗಳನ್ನು ಹಿಡಿದುಕೊಂಡು ಹೋಗಿದ್ದಾರೆ.
ಕಡಲ ತೀರದಲ್ಲಿ ಮೀನುಗಳ ಜಿಗಿಯುತ್ತಿರುವ ಮತ್ತು ಜನರು ಮೀನು ಹಿಡಿದುಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.
- Advertisement -


