Saturday, June 6, 2026
Homeಕರಾವಳಿಮಂಗಳೂರುಸುಬ್ರಮಣ್ಯ: ಅರ್ಚಕರ ಬೈಕ್ ಗೆ ಕಡವೆ ಡಿಕ್ಕಿ, ಗಂಭೀರ ಗಾಯ

ಸುಬ್ರಮಣ್ಯ: ಅರ್ಚಕರ ಬೈಕ್ ಗೆ ಕಡವೆ ಡಿಕ್ಕಿ, ಗಂಭೀರ ಗಾಯ

- Advertisement -
- Advertisement -

ಸುಬ್ರಮಣ್ಯ: ಅರ್ಚಕರ ಬೈಕ್ ಗೆ ಕಡವೆ ಡಿಕ್ಕಿಯಾಗಿ ಗಂಭೀರ ಗಾಯಗಳಾಗಿರುವ ಘಟನೆ ಬಳ್ಪ ಸಮೀಪದ ಎಡೋಣಿ ಎಂಬಲ್ಲಿ ನಡೆದಿದೆ. ಪಂಜ ಗ್ರಾಮದ ವಾಸು ಭಟ್ ಗಾಯಗೊಂಡ ಅರ್ಚಕ.

ವಾಸು ಭಟ್ ಅವರು ಬೆಳಗ್ಗೆ ಸುಮಾರು ನಾಲ್ಕರಿಂದ ಐದು ಗಂಟೆಯ ವೇಳೆಗೆ ಪಂಜದ ತನ್ನ ಮನೆಯಿಂದ  ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ಸರ್ಪಸಂಸ್ಕಾರ ಪೂಜೆ ಮಾಡಲು ಬರುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ.

ಕಡವೆಯಂತಿರುವ ಕಾಡು ಪ್ರಾಣಿ ಢಿಕ್ಕಿ ಹೊಡೆದಿರುವುದು ಮೆಲ್ನೋಟಕ್ಕೆ ಕಂಡು ಬಂದಿದ್ದು,  ಅಪಘಾತ ಸ್ಥಳದಲ್ಲಿ ಪ್ರಾಣಿಯ ರೋಮದಂತಿರುವ   ಕುರುಹುಗಳ ಕಂಡು ಬಂದಿದೆ.

ಅಪಘಾತದಲ್ಲಿ  ಗಂಭೀರವಾಗಿ  ಗಾಯಗೊಂಡ  ಗಾಯಾಳುವನ್ನು   ಸ್ಥಳೀಯರು ತಕ್ಷಣವೇ ಆಂಬುಲೆನ್ಸ್ ಮೂಲಕ ಪುತ್ತೂರು ಖಾಸಗಿ ಆಸ್ಪತ್ರೆಗೆ ಸೇರಿಸಿ ಬಳಿಕ   ಹೆಚ್ಚಿನ ತುರ್ತು ಚಿಕಿತ್ಸೆಗೆ ಅವರನ್ನು ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು  ತಿಳಿದು ಬಂದಿದೆ.

- Advertisement -

Latest News

error: Content is protected !!