ಉಡುಪಿ; ಅಕ್ರಮ ವಲಸೆ ಬಂದ ಬಾಂಗ್ಲಾ ದೇಶಿಯರಿಗೆ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು CJM ನ್ಯಾಯಾಲಯ ಶಿಕ್ಷೆ ಪ್ರಕಟಿಸಿ ಆದೇಶ ನೀಡಿದೆ.10ಮಂದಿ ಆರೋಪಿತರಿಗೆ ಎರಡು ವರ್ಷ ಸಜೆ ಮತ್ತು ತಲಾ ಹತ್ತು ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.
ಉಡುಪಿಯ ಮಲ್ಪೆ ಪೊಲೀಸರ ಕಾರ್ಯಾಚರಣೆ ನಡೆಸಿ ಒಟ್ಟು ಹತ್ತು ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆದಿದ್ದರು. ಅ.11 ರಂದು ಏಳು ಮಂದಿಯ ಬಂಧನ ವಾಗಿತ್ತು. ಇವರು ನೀಡಿದ ಮಾಹಿತಿಯ ಆಧಾರದಲ್ಲಿ ಮತ್ತೆ ಮೂವರ ಬಂಧನವಾಗಿತ್ತು . ಬಂಧಿತರಲ್ಲಿ ಭಾರತ ದೇಶದ ಯಾವುದೇ ಅನುಮತಿ ದಾಖಲೆ ಇರಲಿಲ್ಲ. ನಕಲಿ ಆಧಾರ್ ಕಾರ್ಡ್ ದಾಖಲೆ ಸೃಷ್ಟಿಸಿದ್ದರು. ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿರುವುದಾಗಿ ಮಾಹಿತಿ ನೀಡಿದ್ದರು.ಇದೀಗ ಆರೋಪಿಗಳಾದ ಹಕೀಂ ಆಲಿ, ಸುಜೋನ್ ಎಸ್ .ಕೆ, ಇಸ್ಮಾಯಿಲ್ ಎಸ್. ಕೆ, ಕರೀಂ ಎಸ್.ಕೆ, ಸಲಾಂ ಎಸ್.ಕೆ, ರಾಜಿಕುಲ್ ಎಸ್.ಕೆ, ಸೋಜಿಬ್, ರಿಮೋಲ್ ಮಹಮ್ಮದ್ ಇಮಾಮ್ ಶೇಖ್, ಮಹಮ್ಮದ್ ಜಹಾಂಗೀರ್ ಆಲಂಗೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ


