Tuesday, July 14, 2026
Homeಕರಾವಳಿಮಂಗಳೂರುಮಂಗಳೂರು; ಮೊಟ್ಟೆ ಸಾಗಾಟದ ವಾಹನ ಪಲ್ಟಿ: ರಸ್ತೆ ಪಾಲಾದ ಸಾವಿರಾರು ರೂಪಾಯಿ ಮೌಲ್ಯದ ಮೊಟ್ಟೆಗಳು

ಮಂಗಳೂರು; ಮೊಟ್ಟೆ ಸಾಗಾಟದ ವಾಹನ ಪಲ್ಟಿ: ರಸ್ತೆ ಪಾಲಾದ ಸಾವಿರಾರು ರೂಪಾಯಿ ಮೌಲ್ಯದ ಮೊಟ್ಟೆಗಳು

- Advertisement -
- Advertisement -

ಮಂಗಳೂರು; ಮೊಟ್ಟೆ ಸಾಗಾಟದ ವಾಹನ ಪಲ್ಟಿಯಾಗಿ ಸಾವಿರಾರು ರೂಪಾಯಿ ಮೌಲ್ಯದ ಮೊಟ್ಟೆಗಳು ರಸ್ತೆ ಪಾಲಾದ ಘಟನೆ ಅಡ್ಯಾರ್ ಬಳಿ ನಡೆದಿದೆ.

ಫರಂಗಿಪೇಟೆ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ವಾಹನಕ್ಕೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಬಳಿ ಹಿಂದಿನಿಂದ ಲಾರಿ ಢಿಕ್ಕಿಯಾಗಿದೆ. ಇದರಿಂದ ಡಿವೈಡರ್ ಮೇಲೆ ಹತ್ತಿದ್ದ ಮೊಟ್ಟೆ ಸಾಗಾಟದ ವಾಹನ ಮಗುಚಿ ಬಿದ್ದಿದೆ.ಪರಿಣಾಮ ಸಾವಿರಾರು ರೂಪಾಯಿ ಮೌಲ್ಯದ ಮೊಟ್ಟೆಗಳು ಒಡೆದು ರಸ್ತೆಯುದ್ದಕ್ಕೂ ಚೆಲ್ಲಿದೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ. ಆದರೆ ರಸ್ತೆಯಲ್ಲಿ ಮೊಟ್ಟೆ ಒಡೆದು ಚೆಲ್ಲಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

- Advertisement -

Latest News

error: Content is protected !!