Saturday, June 13, 2026
Homeಕರಾವಳಿಉಡುಪಿಬಿಜೂರಿನ ಭಾಸ್ಕರ್‌ ದೇವಾಡಿಗರಿಗೆ 2022ರ ಸಾಲಿನ ʻಕರ್ನಾಟಕ ಕ್ರೀಡಾ ರತ್ನ'

ಬಿಜೂರಿನ ಭಾಸ್ಕರ್‌ ದೇವಾಡಿಗರಿಗೆ 2022ರ ಸಾಲಿನ ʻಕರ್ನಾಟಕ ಕ್ರೀಡಾ ರತ್ನ’

- Advertisement -
- Advertisement -

ಕುಂದಾಪುರ:ಕರ್ನಾಟಕ ಸರಕಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕೊಡಮಾಡುವ 2022ರ ಸಾಲಿನ “ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿಯನ್ನು ದೇಸಿ ಕ್ರೀಡೆಯಾದ ಕಂಬಳದ ಓಟಗಾರ ಬಿಜೂರಿನ ಭಾಸ್ಕರ್‌ ದೇವಾಡಿಗ ಅವರಿಗೆ ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು.

ಭಾಸ್ಕರ್‌ ದೇವಾಡಿಗ ವೃತ್ತಿಯಲ್ಲಿ ಕೃಷಿಕರಾಗಿದ್ದು, ಇವರು ನಂದನವನ ಗ್ರಾಮದ ಮಹಾ ಬಲೇಶ್ವರ್‌ ಬಡಾಮನೆಯ ಕೃಷ್ಣ ದೇವಾ ಡಿಗ ಹಾಗೂ ಗುರುವಮ್ಮ ದಂಪತಿಯ ಪುತ್ರನಾಗಿದ್ದಾರೆ.

ಕಳೆದ 15 ವರ್ಷಗಳಿಗೂ ಹೆಚ್ಚು ಕಾಲದಿಂದ ಕಂಬಳದ ಓಟಗಾರರಾಗಿದ್ದಾರೆ. ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ನಡೆ ಯುವ ಸಾಂಪ್ರದಾಯಿಕ
ಕಂಬಳಗಳಲ್ಲಿ 300ಕ್ಕೂ ಮಿಕ್ಕಿ ಪದಕ ಗೆದ್ದಿರುವ ಭಾಸ್ಕರ್‌ಅವರು, ಅವಿಭಜಿತ ದ.ಕ. ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಯುವ ಜೋಡುಕರೆ ಕಂಬಳಗಳಲ್ಲಿ 75ಕ್ಕೂ ಅಧಿಕಪದಕ ಗೆದ್ದ ಸಾಧನೆ ಮಾಡಿದ್ದಾರೆ.

- Advertisement -

Latest News

error: Content is protected !!