Friday, June 26, 2026
Homeತಾಜಾ ಸುದ್ದಿಕಾಸರಗೋಡು ಸಬ್ ಜೈಲ್ ನಲ್ಲಿ ವಿಚಾರಣಾಧೀನ ಕೈದಿಯ ನಿಗೂಢ ಸಾವು

ಕಾಸರಗೋಡು ಸಬ್ ಜೈಲ್ ನಲ್ಲಿ ವಿಚಾರಣಾಧೀನ ಕೈದಿಯ ನಿಗೂಢ ಸಾವು

- Advertisement -
- Advertisement -

ಕಾಸರಗೋಡು: ಇಲ್ಲಿನ ಸಬ್ ಜೈಲ್ ನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ದೇಳಿ ನಿವಾಸಿ ಮುಬಾಶಿರ್(30) ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಬಾಶಿರ್ ಬುಧವಾರ ಮುಂಜಾನೆ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಆತನನ್ನು ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನು ಸಾವಿಗೆ ನಿಖರ ಕಾರಣ ಬಂದಿಲ್ಲ. ಕೊಲೆ ಎಂಬ ಆರೋಪ ಕುಟುಂಬ ವಲಯದಿಂದ ಕೇಳಿ ಬರುತ್ತಿದೆ. ನವೆಂಬರ್ 5 ರಂದು ಈತನನ್ನು ಫೋಕ್ಸೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿತ್ತು.

- Advertisement -

Latest News

error: Content is protected !!