Saturday, June 6, 2026
Homeಕರಾವಳಿಉಡುಪಿಮುಂಬೈನಲ್ಲಿ ನಡೆದ ಅಪಘಾತಕ್ಕೆ ಉಡುಪಿಯ ಯುವಕ ಬಲಿ

ಮುಂಬೈನಲ್ಲಿ ನಡೆದ ಅಪಘಾತಕ್ಕೆ ಉಡುಪಿಯ ಯುವಕ ಬಲಿ

- Advertisement -
- Advertisement -

ಮುಂಬೈ: ಥಾಣೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಉಡುಪಿಯ ಯುವಕನೊಬ್ಬ ಬಲಿಯಾಗಿದ್ದಾನೆ. ಉಡುಪಿಯ ಕಲ್ಮಾಡಿ ಮೂಲದ ಇನಿಶ್ ಲಸ್ರಾದೊ (25) ಮೃತ ಯುವಕ. ಇನಿಶ್ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.


ಇನಿಶ್ ಕಳೆದ ಮೂರು ವರ್ಷಗಳಿಂದ ಥಾಣೆಯಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕಲ್ಮಾಡಿ ಚರ್ಚ್‌ನ ಐಸಿವೈಎಂ ಘಟಕದಲ್ಲಿ ಮತ್ತು ವಿವಿಧ ಚರ್ಚ್ ಚಟುವಟಿಕೆಗಳಲ್ಲಿ ಬಹಳ ಸಕ್ರಿಯರಾಗಿದ್ದರು. ಮೃತರು ತಂದೆ ಅಪೊಲೊ, ತಾಯಿ ಐರೀನ್ ಮತ್ತು ಸಹೋದರಿ ಅಶ್ವಿನಿ ಲಸ್ರಾದೊ ಅವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!