Saturday, June 6, 2026
Homeತಾಜಾ ಸುದ್ದಿಮಗಳ ಮದುವೆ ಸಂಭ್ರಮದಲ್ಲಿರುವಾಗಲೇ ಸ್ಮೃತಿ ಮಂಧಾನಾ ತಂದೆಗೆ ಲಘು ಹೃದಯಾಘಾತ; ವಿವಾಹ ಕಾರ್ಯಕ್ರಮ ಮುಂದೂಡಿಕೆ

ಮಗಳ ಮದುವೆ ಸಂಭ್ರಮದಲ್ಲಿರುವಾಗಲೇ ಸ್ಮೃತಿ ಮಂಧಾನಾ ತಂದೆಗೆ ಲಘು ಹೃದಯಾಘಾತ; ವಿವಾಹ ಕಾರ್ಯಕ್ರಮ ಮುಂದೂಡಿಕೆ

- Advertisement -
- Advertisement -

ನ್ಯೂಸ್ ಡೆಸ್ಕ್; ಮಗಳ ಮದುವೆ ಸಂಭ್ರಮದಲ್ಲಿರುವಾಗಲೇ ಸ್ಮೃತಿ ಮಂಧಾನಾ ತಂದೆಗೆ ಲಘು ಹೃದಯಾಘಾತವಾಗಿದ್ದು ವಿವಾಹ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ.

ಮಂಧಾನಾ ಅವರ ಹುಟ್ಟೂರು ಸಾಂಗ್ಲಿಯಲ್ಲಿ ಇಂದು ಮದುವೆ ಸಮಾರಂಭ ಆಯೋಜನೆಗೊಂಡಿತ್ತು. ಮದುವೆ ಕಾರ್ಯಕ್ರಮ ನಡೆಯುತ್ತಿದ್ದಾಗ ಸ್ಮೃತಿ ಮಂಧಾನಾ ಅವರ ತಂದೆ ಶ್ರೀನಿವಾಸ್‌ ಅವರಿಗೆ ಲಘು ಹೃದಯಾಘಾತ ಸಂಭವಿಸಿದೆ.

ಅನಾರೋಗ್ಯಕ್ಕೆ ಒಳಗಾದ ಬೆನ್ನಲ್ಲೇ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಅಂಬುಲೆನ್ಸ್‌ ಬಂದು ಶ್ರೀನಿವಾಸ್‌ ಅವರನ್ನು ಕರೆದುಕೊಂಡು ಹೋಗಿದೆ. ಸ್ಮೃತಿ ಮಂಧಾನಾ ಮತ್ತು ಸಂಗೀತ ಸಂಯೋಜಕ, ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ಅವರ ವಿವಾಹ ಕಾರ್ಯಕ್ರಮ ಭರ್ಜರಿಯಾಗಿ ನಡೆದಿತ್ತು. ಇವರ ವಿವಾಹ ಸಂಭ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

- Advertisement -

Latest News

error: Content is protected !!