Tuesday, June 9, 2026
Homeಕರಾವಳಿಭಾರತದ ಅತ್ಯಂತ ಶ್ರೀಮಂತ ಮಹಿಳಾ ಪಟ್ಟಿಯ ಅಗ್ರಸ್ಥಾನದಲ್ಲಿ ಮಂಗಳೂರಿನ ಜಯಶ್ರೀ ಉಳ್ಳಾಲ್‌

ಭಾರತದ ಅತ್ಯಂತ ಶ್ರೀಮಂತ ಮಹಿಳಾ ಪಟ್ಟಿಯ ಅಗ್ರಸ್ಥಾನದಲ್ಲಿ ಮಂಗಳೂರಿನ ಜಯಶ್ರೀ ಉಳ್ಳಾಲ್‌

- Advertisement -
- Advertisement -

ಮಂಗಳೂರಿನಲ್ಲಿ ಜನಿಸಿದ ಟೆಕ್ ಲೀಡರ್ ಜಯಶ್ರೀ ಉಳ್ಳಾಲ್ ಅವರು ಹುರುನ್ ರೀಸರ್ಚ್ ಪ್ರಕಟಿಸಿದ ಇಂಡಿಯಾ ರಿಚ್ ಲಿಸ್ಟ್ 2025ರ ಪ್ರಕಾರ ಭಾರತದ ಅತ್ಯಂತ ಶ್ರೀಮಂತ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಹೊರಹೊಮ್ಮಿದ್ದಾರೆ.

ಹುರುನ್ ರೀಸರ್ಚ್ ಪ್ರಕಟಿಸಿದ ಇಂಡಿಯಾ ರಿಚ್ ಲಿಸ್ಟ್ 2025ರ ಪಟ್ಟಿಯಲ್ಲಿ ಜಯಶ್ರೀ ಉಳ್ಳಾಲ್ ಅವರು 50,170 ಕೋಟಿ ರೂ. ಸಂಪತ್ತಿನೊಂದಿಗೆ ಅಗ್ರಸ್ಥಾನ ಗಳಿಸಿದ್ದಾರೆ.

ಜಯಶ್ರೀ ಉಳ್ಳಾಲ್ 2008 ರಿಂದ ಕಂಪ್ಯೂಟರ್ ನೆಟ್‌ವರ್ಕಿಂಗ್ ಸಂಸ್ಥೆಯಾದ ಅರಿಸ್ಟಾ ನೆಟ್‌ವರ್ಕ್ಸ್‌ನ ಅಧ್ಯಕ್ಷೆ ಮತ್ತು ಸಿಇಒ ಆಗಿದ್ದಾರೆ. ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಯಾದ ಅರಿಸ್ಟಾ ನೆಟ್ವರ್ಕ್ಸ್ ಕಳೆದ ವರ್ಷ 7 ಬಿಲಿಯನ್ ಡಾಲರ್‌ಗಳ ಆದಾಯವನ್ನು ದಾಖಲಿಸಿದ್ದು, ಹಿಂದಿನ ವರ್ಷಕ್ಕಿಂತ ಶೇ 20 ರಷ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!