- Advertisement -
![]()
- Advertisement -
ಮಂಗಳೂರು ನಗರದಲ್ಲಿ ಇನ್ನೆರಡು ಕಡೆಗಳಲ್ಲಿ ಪಾರ್ಕ್‌ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಪಾರ್ಕ್ ಗಳು ಮಂಗಳೂರಿನ ಕಲ್ಲಕಂಡದಲ್ಲಿ ಹಾಗೂ ಕದ್ರಿಯ ಸ್ಕೇಟಿಂಗ್ ರಿಂಕ್ ಬಳಿ ತಲೆ ಎತ್ತಲಿವೆ.
ಅಮೃತ್ ಯೋಜನೆಯ ಮೂಲಕ 2 ಕೋಟಿ ರೂ. ವೆಚ್ಚದಲ್ಲಿ ಕಲ್ಲಕಂಡ ಪಾರ್ಕ್ ಮತ್ತು 2.50 ಕೋಟಿ ರೂ. ವೆಚ್ಚದಲ್ಲಿ ಕದ್ರಿ ಸ್ಕೇಟಿಂಗ್ ರಿಂಕ್ ಬಳಿಯ ವಿಶಾಲ ಪ್ರದೇಶ ಪಾರ್ಕ್ ಆಗಿ ಹೊಸ ರೂಪ ಪಡೆಯಲಿದೆ. ಈ ಕುರಿತು ವಿಸ್ತೃತ ಯೋಜನ ವರದಿ ಸಲ್ಲಿಕೆ ಮಾಡಲಾಗಿದ್ದು,
ಟೆಂಡರ್ ಕರೆಯುವ ನಿಟ್ಟಿನಲ್ಲಿ ತಾಂತ್ರಿಕ ಅನುಮೋದನೆಗೆ ಕಳುಹಿಸಲಾಗಿದೆ.
ಮಂಗಳೂರು ಉತ್ತರ ಭಾಗದ ಕೋಡಿಕಲ್‌ನ ಕಲ್ಲಕಂಡ ಮತ್ತು ಮಂಗಳೂರು ದಕ್ಷಿಣ ಭಾಗದ ಕದ್ರಿ ಪಾರ್ಕ್ ಬಳಿ ಪ್ರದೇಶ ಅಭಿವೃದ್ಧಿ ಕಾಣಲಿದೆ.
- Advertisement -


