- Advertisement -
![]()
- Advertisement -
ಮಂಗಳೂರು: ಬಾಂಗ್ಲಾದೇಶದಲ್ಲಿ ನಡೆಯುವ ಎರಡನೇ ವಿಶ್ವಕಪ್ ಕಬ್ಬಡಿ ಪಂದ್ಯಾಟದಲ್ಲಿ ಸುರತ್ಕಲ್ ನ ಧನಲಕ್ಷ್ಮೀ ಪೂಜಾರಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಸುರತ್ಕಲ್ ಇಡ್ಯಾ ಸಂಜೀವ ಪೂಜಾರಿಯವರ ಮೊಮ್ಮಗಳು ನಾರಾಯಣ ಪೂಜಾರಿ ಹಾಗೂ ಶಶಿಕಲಾ ದಂಪತಿಯ ಮಗಳಾದ ಧನಲಕ್ಷ್ಮೀ ಇವರು ಕಬಡ್ಡಿ ಕ್ರೀಡೆಯಲ್ಲಿ ಭಾರತ ದೇಶದ ಪರವಾಗಿ ಆಡಲು ಆಯ್ಕೆಯಾಗಿದ್ದಾರೆ, ಕರ್ನಾಟಕದ ಪರವಾಗಿ ಧನಲಕ್ಷ್ಮೀ ಒಬ್ಬರೇ ಆಯ್ಕೆಯಾಗಿದ್ದು, ದಕ್ಷಿಣಕನ್ನಡಕ್ಕೆ ಮತ್ತು ನಮ್ಮ ರಾಜ್ಯಕ್ಕೆ ಹೆಮ್ಮೆಯ ಕ್ಷಣವಾಗಿದೆ. ನವೆಂಬರ್ 13ರಂದು ಬಾಂಗ್ಲಾದೇಶ ದಲ್ಲಿ ನಡೆಯಲಿರುವ 12 ರಾಷ್ಟ್ರಗಳ ಮಹಿಳಾ ವಿಶ್ವಕಪ್ ಕಬಡ್ಡಿಯಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಇದುವರೆಗೆ 12 ಬಾರಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಜೂನಿಯರ್, ಸೀನಿಯರ್, ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಕರ್ನಾಟಕದ ಪರವಾಗಿ ಧನಲಕ್ಷ್ಮೀ ಒಬ್ಬರೇ ಆಯ್ಕೆಯಾಗಿದ್ದಾರೆ.
- Advertisement -


