Saturday, June 13, 2026
Homeತಾಜಾ ಸುದ್ದಿಕುಡಿಯುವ ನೀರಿನ ನಲ್ಲಿಯಲ್ಲಿ ನೀರಿನ ಬದಲು ಬಂದ ಹೊಗೆ!

ಕುಡಿಯುವ ನೀರಿನ ನಲ್ಲಿಯಲ್ಲಿ ನೀರಿನ ಬದಲು ಬಂದ ಹೊಗೆ!

- Advertisement -
- Advertisement -

ರಾಮನಗರ: ಮನೆಗಳಲ್ಲಿ ಅಳವಡಿಸಿರುವ ಕುಡಿಯುವ ನೀರಿನ ನಲ್ಲಿಯಲ್ಲಿ ನೀರಿನ ಬದಲು ಹೊಗೆ ಬಂದ ಘಟನೆ ರಾಮನಗರದಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಹಳೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ನೆಲದಲ್ಲಿ ಅಳವಡಿಸಿರುವ ವಿದ್ಯುತ್ ವೈರ್ ಗಳು ಸ್ಪಾರ್ಕ್ ಆಗಿ ನೀರಿನ ಪೈಪ್ ಗಳ ಮೂಲಕ ಹೊಗೆ ಬಂದಿರುವ ಶಂಕೆ ವ್ಯಕ್ತವಾಗಿದೆ.

ಹತ್ತಕ್ಕೂ ಹೆಚ್ಚು ಮನೆಗಳಲ್ಲಿನ ನಲ್ಲಿಗಳಲ್ಲಿ ಹೊಗೆ ಬಂದಿದ್ದು, ಹೊಗೆ ಸ್ಥಳಕ್ಕೆ ಬೆಂಗಳೂರು ಜಲಮಂಡಳಿ ಹಾಗೂ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಬಳಿಕ ನಲ್ಲಿಯಲ್ಲಿ ಹೊಗೆ ಬರುವುದು ಸ್ಥಗಿತವಾಗಿದೆ ಎಂಹ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!