Wednesday, June 3, 2026
Homeಕರಾವಳಿಮಂಗಳೂರುಪುತ್ತೂರಿನಿಂದ ಬಾಳುಗೋಡಿಗೆ ಹೋಗುತ್ತಿದ್ದ ಕೆಎಸ್ ಆರ್ಟಿಸಿ ಬಸ್ ನಲ್ಲಿ ಮಹಿಳೆಯ ಕರಿಮಣಿ ಸರ ಎಗರಿಸಿದ ಕಳ್ಳರು

ಪುತ್ತೂರಿನಿಂದ ಬಾಳುಗೋಡಿಗೆ ಹೋಗುತ್ತಿದ್ದ ಕೆಎಸ್ ಆರ್ಟಿಸಿ ಬಸ್ ನಲ್ಲಿ ಮಹಿಳೆಯ ಕರಿಮಣಿ ಸರ ಎಗರಿಸಿದ ಕಳ್ಳರು

- Advertisement -
- Advertisement -

ಪುತ್ತೂರಿನಿಂದ ಬಾಳುಗೋಡಿಗೆ ಹೋಗುತ್ತಿದ್ದ ಕೆಎಸ್ ಆರ್ಟಿಸಿ ಬಸ್ ನಲ್ಲಿ ಕಳ್ಳರು ಮಹಿಳೆಯ2 ಲಕ್ಷ ಮೌಲ್ಯದ ಕರಿಮಣಿ ಸರ ಎಗರಿಸಿದ ಘಟನೆ ಅ27 ರಂದು ಸಂಜೆ ನಡೆದಿದೆ.

ಮಹಿಳೆ ಮತ್ತು ಅವರ ಸಹೋದರಿಯರು ಅಕ್ಟೋಬರ್ 27 ರಂದು ಸಂಜೆ 4.17 ಕ್ಕೆ ಪುತ್ತೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಕಾಣಿಯೂರು-ಬಾಳುಗೋಡು ಮಾರ್ಗದ ಬಸ್ ಹತ್ತಿದ್ದಾರೆ. ಸಂಜೆ 4:45ರ ಸುಮಾರಿಗೆ ಕಾಣಿಯೂರಿನ ಕಡೆಗೆ ಪ್ರಯಾಣಿಸುತ್ತಿದ್ದಾಗ, ಮಹಿಳೆಗೆ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳವಾಗಿರುವುದು ಅವರ ಗಮನಕ್ಕೆ ಬಂದಿದೆ. ಕೂಡಲೇ
ಮಹಿಳೆ ಮತ್ತು ಅವರ ಕುಟುಂಬಸ್ಥರು ಸವಣೂರು ಹಾಗೂ ಕಾಣಿಯೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದಾರೆ. ಆದರೆ, ಕಳವಾದ ಸರ ಪತ್ತೆಯಾಗಿಲ್ಲ. ಇದಾದ ಬಳಿಕ, ಅವರ ಮಗ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕಳ್ಳರನ್ನು ಪತ್ತೆಗೆ ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!