Thursday, June 4, 2026
Homeತಾಜಾ ಸುದ್ದಿಮೈಸೂರು ದಸರಾದಲ್ಲಿ ನಂದಿ ಕಂಬ ಪೂಜೆ ಬಳಿಕ ಮೂರನೇ ಪ್ರಯತ್ನದಲ್ಲಿ ಈಡುಗಾಯಿ ಒಡೆಯಲು ಯಶಸ್ವಿಯಾದ ಸಿಎಂ...

ಮೈಸೂರು ದಸರಾದಲ್ಲಿ ನಂದಿ ಕಂಬ ಪೂಜೆ ಬಳಿಕ ಮೂರನೇ ಪ್ರಯತ್ನದಲ್ಲಿ ಈಡುಗಾಯಿ ಒಡೆಯಲು ಯಶಸ್ವಿಯಾದ ಸಿಎಂ ಮತ್ತು ಡಿಸಿಎಂ

- Advertisement -
- Advertisement -

ಮೈಸೂರು: ದಸರಾ ಜಂಬೂ ಸವಾರಿಗೆ ಮುನ್ನ ನಂದಿ ಕಂಬ ಪೂಜೆ ಬಳಿಕ ಇಂದು ಈಡುಗಾಯಿ ಒಡೆಯಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಎರಡು ಬಾರಿ ವಿಫಲರಾಗಿ ಮೂರನೇ ಬಾರಿಗೆ ಯಶಸ್ವಿಯಾದ ಘಟನೆ ನಡೆದಿದೆ.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಂದಿ ಕಂಬ ಪೂಜೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈಡುಗಾಯಿ ಒಡೆಯುವ ವೇಳೆ ಎರಡು ಬಾರಿಯೂ ಕಾಯಿ ಒಡೆಯಲಿಲ್ಲ. ನಂತರ ಮೂರನೇ ಬಾರಿಗೆ ಕಾಯಿ ಒಡೆಯಿತು.‌

ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಾ ಈಡುಗಾಯಿ ಒಡೆಯುವ ವೇಳೆ ಎರಡು ಬಾರಿಯೂ ಕಾಯಿ ಒಡೆಯಲಿಲ್ಲ. ಬಳಿಕ ಮೂರನೇ ಬಾರಿಗೆ ಕಾಯಿ ಒಡೆಯಿತು.

ನೆಲದ ಮೇಲೆ ಒಡೆಯುವ ಬದಲು ಪಕ್ಕದಲ್ಲಿ ಹಾಕಿದ್ದ ಕಾರ್ಪೆಟ್ ಬದಲಾಗಿ ಮರದ ಹಲಗೆ ಮೇಲೆ‌ ಒಡೆಯಲು ಸಿಎಂ ಮತ್ತು ಡಿಸಿಎಂ ಇಬ್ಬರೂ ಯತ್ನಿಸಿದ ಕಾರಣ ಮೊದಲ ಎರಡು ಬಾರಿ ಈಡುಗಾಯಿ ಒಡೆಯಲಿಲ್ಲ.

- Advertisement -

Latest News

error: Content is protected !!