- Advertisement -
![]()
- Advertisement -
ಕೊಲ್ಲೂರು: ಮಾಜಿ ಪೊಲೀಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾಮಲೈ ಅವರು ಕೊಲ್ಲೂರು ಮೂಕಾಂಬಿಕೆಯ ದರ್ಶನ ಮಾಡಿದ್ದಾರೆ. ವಿಜಯದಶಮಿಯ ಹಿನ್ನೆಲೆ ಮೂಕಾಂಬಿಕೆಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಿ ದರ್ಶನಕ್ಕಾಗಿ ಇಂದು ಮುಂಜಾನೆಯೇ ದೇವಾಲಯಕ್ಕೆ ಅವರು ಆಗಮಿಸಿದ್ದರು. ಈ ವೇಳೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅಣ್ಣಾಮಲೈ ಅವರಿಗೆ ವಿಶೇಷ ಗೌರವ ಸಲ್ಲಿಸಿದರು.
ಈ ವೇಳೆ ಅಣ್ಣಾಮಲೈ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು , ಭಕ್ತರು ಮುಗಿಬಿದ್ದರು. ಕೆಲಹೊತ್ತು ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಬಳಿಕ ಅಲ್ಲಿಂದ ತೆರಳಿದರು. ಈ ಹಿಂದೆ ಉಡುಪಿಯಲ್ಲಿ ಎಸ್ಪಿ ಆಗಿಯೂ ಕಾರ್ಯ ನಿರ್ವಹಿಸಿದ್ದರು.
- Advertisement -


