Thursday, June 4, 2026
Homeಕರಾವಳಿಉಡುಪಿಕಾರ್ಕಳ: ಮನೆಯಲ್ಲಿ ನವರಾತ್ರಿ ಪೂಜೆ ನಡೆಯುತ್ತಿದ್ದಾಗಲೇ ವಿವಾಹಿತ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ: ಮನೆಯಲ್ಲಿ ನವರಾತ್ರಿ ಪೂಜೆ ನಡೆಯುತ್ತಿದ್ದಾಗಲೇ ವಿವಾಹಿತ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ಕಾರ್ಕಳ: ಮನೆಯಲ್ಲಿ ನವರಾತ್ರಿ ಪೂಜೆ ನಡೆಯುತ್ತಿದ್ದಾಗಲೇ ವಿವಾಹಿತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ನಂದಳಿಕೆ ಎಂಬಲ್ಲಿ ನಡೆದಿದೆ. ಸಂತೋಷ್ ಆಚಾರ್ಯ ಮೃತ ವ್ಯಕ್ತಿ.  

 ಸಂತೋಷ ಆಚಾರ್ಯರವರು ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 30/09/2025 ರಂದು ಪ್ರತಿವರ್ಷದಂತೆ ಮನೆಯಲ್ಲಿ ನವರಾತ್ರಿ ಪೂಜೆ ನಡೆಯುತ್ತಿತ್ತು.  ಸಂತೋಷ ಆಚಾರ್ಯರವರು ಮದ್ಯಪಾನ ಮಾಡಿದ್ದರಿಂದ ಅವರ ಅಣ್ಣ ರಾಮಚಂದ್ರ ರವರ ಮಗ ದೀಪಕ್‌ರವರು ಪೂಜೆಗೆ ಕುಳಿತಿದ್ದರು. ಪೂಜೆ ಮುಗಿದ ನಂತರ ಎಲ್ಲರೂ ಅವರವರ ಕೆಲಸದಲ್ಲಿದ್ದು ಸಂತೋಷ ಆಚಾರ್ಯ ರವರು 17:15 ಗಂಟೆಗೆ ಒಮ್ಮಲೇ ಮನೆಯೊಳಗೆ ಹೋಗಿ ಹಾಲ್‌ನಲ್ಲಿ ಕಬ್ಬಿಣದ ಜಂತಿಗೆ ಲುಂಗಿ ಕಟ್ಟಿ ಕುತ್ತಿಗೆಗೆ ನೇಣು ಹಾಕಿಕೊಂಡಿದ್ದನ್ನು 17:30 ಗಂಟೆಗೆ ನೋಡಿ ಕೂಡಲೇ ನೇಣಿನಿಂದ ಇಳಿಸಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ಸಂತೋಷ ಆಚಾರ್ಯ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!