ನವದೆಹಲಿ: ಆರ್. ಎಸ್. ಎಸ್ ನ ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ₹100 ಮುಖಬೆಲೆಯ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.
ದೆಹಲಿಯ ಡಾ. ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿ ಮಾತನಾಡಿ, ” ಇದೇ ವೇಳೆ ಮಾತನಾಡಿದ ಅವರು, ‘ಭಾರತ ಮಾತೆಯ ಚಿತ್ರವನ್ನು ನಾಣ್ಯದ ಮೇಲೆ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುದ್ರಿಸಲಾಗಿದೆ. ಇದು ಬಹಳ ಹೆಮ್ಮೆ ಮತ್ತು ಐತಿಹಾಸಿಕ ಮಹತ್ವವನ್ನು ಸೂಚಿಸುತ್ತದೆ’ ಎಂದು ಹೇಳಿದ್ದಾರೆ.
ಇನ್ನು ನಾಣ್ಯದ ವಿಶೇಷ ಎಂಬಂತೆ ನಾಣ್ಯದ ಮೇಲೆ ಆರ್‌ಎಸ್‌ಎಸ್ ಧ್ಯೇಯ ವಾಕ್ಯವನ್ನು ಸಹ ಮುದ್ರಿಸಲಾಗಿದೆ. ಇನ್ನು ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನವನ್ನು ಮತ್ತು ಇನ್ನೊಂದು ಬದಿಯಲ್ಲಿ ‘ವರದ ಮುದ್ರೆ’ಯಲ್ಲಿ ಸಿಂಹದ ಮೇಲೆ ಕುಳಿತಿರುವ ಭಾರತ ಮಾತೆಯ ಚಿತ್ರವಿದೆ. ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ವರ್ಷ ಎಂದು ಬರೆಯಲಾಗಿದೆ.
ಸಮಾರಂಭದಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಭಾಗವಹಿಸಿದ್ದರು.


