Monday, June 8, 2026
Homeಕರಾವಳಿಮಂಗಳೂರು ಬಂಟ್ವಾಳ; ಜಾನುವಾರು  ಹತ್ಯೆ  ಪ್ರಕರಣದ ಆರೋಪಿಯ  ಮನೆ/ ಅಕ್ರಮ ಕಸಾಯಿಖಾನೆ ಜಪ್ತಿ ಮಾಡಿಸಿದ  ಬಂಟ್ವಾಳ ಗ್ರಾಮಾಂತರ...

 ಬಂಟ್ವಾಳ; ಜಾನುವಾರು  ಹತ್ಯೆ  ಪ್ರಕರಣದ ಆರೋಪಿಯ  ಮನೆ/ ಅಕ್ರಮ ಕಸಾಯಿಖಾನೆ ಜಪ್ತಿ ಮಾಡಿಸಿದ  ಬಂಟ್ವಾಳ ಗ್ರಾಮಾಂತರ ಪೊಲೀಸ್‍ ಠಾಣಾ ಪೊಲೀಸರು

- Advertisement -
- Advertisement -

 ಬಂಟ್ವಾಳ; ಜಾನುವಾರು  ಹತ್ಯೆ  ಪ್ರಕರಣದ ಆರೋಪಿಯ  ಮನೆ/ ಅಕ್ರಮ ಕಸಾಯಿಖಾನೆಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್‍ ಠಾಣಾ ಪೊಲೀಸರು ಜಪ್ತಿ ಮಾಡಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳ ನಿವಾಸಿಯಾದ ಹಸನಬ್ಬ  ಎಂಬಾತನ ಮನೆ/ ಅಕ್ರಮ ಕಸಾಯಿ ಖಾನೆಯನ್ನು ಜಪ್ತಿ ಮಾಡಿದ್ದಾರೆ.

ಈತನ ವಿರುದ್ಧ ಗೋ ಕಳವು , ಗೋವಧೆಯಂತಹ  ಪ್ರಕರಣಗಳು ದಾಖಲಾಗಿವೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹಾಗೂ ಈತನ ವಿರುದ್ದ 2017 ನೇ ಸಾಲಿನಲ್ಲಿ ಅಕ್ರ 65/2017 ಕಲಂ 379 ಐಪಿಸಿ ಮತ್ತು 4,5,11 ಗೋಸಂರಕ್ಷಣಾ ಕಾಯಿದೆ ಮತ್ತು 11(ಎಲ್‌) ಗೋಹತ್ಯೆ ನಿಷೇಧ ಕಾಯಿದೆ , 2008 ನೇ ಸಾಲಿನಲ್ಲಿ ಅಕ್ರ 88/2018 ಕಲಂ 379 ಐಪಿಸಿ ಮತ್ತು 4,5,11 ಗೋಸಂರಕ್ಷಣಾ ಕಾಯಿದೆ ಮತ್ತು 11(ಎಲ್‌) ಗೋಹತ್ಯೆ ನಿಷೇಧ ಕಾಯಿದೆಯಂತೆ ಪ್ರಕರಣಗಳು ದಾಖಲಾಗಿರುತ್ತದೆ.

 ಈತನು ಗೋ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಕಳವು ಮಾಡಿ ತಂದಂತಹ ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಮನೆಯಲ್ಲಿಯೇ ಕಸಾಯಿಖಾನೆ ನಿರ್ಮಾಣ ಮಾಡಿಕೊಂಡು ವಧೆ ಮಾಡಿ ಮಾಂಸ ಮಾಡುತ್ತಿದ್ದು  ಈತನನ್ನು ನಿಯಂತ್ರಿಸಲು ಈತನು ಮನೆಯಲ್ಲಿಯೇ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಸಾಯಿಖಾನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸಹಾಯಕ ಆಯುಕ್ತರು  ಹಾಗೂ  ಉಪವಿಭಾಗೀಯ ದಂಡಾಧಿಕಾರಿ ಮಂಗಳೂರು ಉಪವಿಭಾಗರವರಿಗೆ ವರದಿಯನ್ನು ಸಲ್ಲಿಸಲಾಗಿತ್ತು. ಅದರಂತೆ  ಸಹಾಯಕ ಆಯುಕ್ತರು  ಹಾಗೂ  ಉಪವಿಭಾಗೀಯ ದಂಡಾಧಿಕಾರಿ ಮಂಗಳೂರು ಉಪವಿಭಾಗರವರು ಕರ್ನಾಟಕ ಜಾನುವಾರು  ಹತ್ಯೆ ಪ್ರತಿಬಂಧಕ  ಮತ್ತು ಸಂರಕ್ಷಣಾ ಅಧಿನಿಯಮ 2020 ರ ಕಲಂ 8(4) 8(5) ರಡಿಯಲ್ಲಿ  ದಿನಾಂಕ: 25/09/2025 ರಂದು  ಪ್ರಕರಣ ಸಂಖ್ಯೆ  ಎಂ.ಎ.ಜಿ/ಎಸ್‌ ಆರ್‌ .44/2025‌ ರಂತೆ ಠಾಣಾ ಅಕ್ರ 123/2025  ನೇ ದರಂತೆ   ಈತನ ವಶದಲ್ಲಿರುವ  ಪುದು ಗ್ರಾಮ ಪಂಚಾಯತ್‌ ವ್ಯಾಪ್ತಿಯ  ಮಾರಿಪಳ್ಳ ಪಾಡಿ ಎಂಬಲ್ಲಿರುವ ಮನೆಯನ್ನು / ಅಕ್ರಮ ಕಸಾಯಿ ಕಾನೆಯನ್ನು ಜಪ್ತಿ ಮಾಡಿ ಸರಕಾರದ  ವಶಕ್ಕೆ  ಪಡೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಇಂತಹ ಪ್ರಕರಣದಲ್ಲಿ ಮನೆ/ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಮಾಡಿರುವುದು ಇದು ಮೊದಲನೆಯದಾಗಿದೆ

- Advertisement -

Latest News

error: Content is protected !!