- Advertisement -
![]()
- Advertisement -
ಬೆಂಗಳೂರು: ಬಿಗ್ ಬಾಸ್ ಸೀಸನ್ ಆರಂಭವಾದ ಮೊದಲ ದಿನವೇ ವೀಕ್ಷಕತರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಕರಾವಳಿಗರು ಬಿಗ್ ಬಾಸ್ ಸೀಸನ್ 12 ರ ಬಗ್ಗೆ ಭಾರೀ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಬಿಗ್ ಬಾಸ್ ಮನೆಗೆ ಹೋದ ಒಂದೇ ಗಂಟೆಯಲ್ಲಿ ಕರಾವಳಿ ಹುಡುಗಿ ರಕ್ಷಿತಾ ಶೆಟ್ಟಿ ಅವರನ್ನು ಹೊರಗೆ ಕಳುಹಿಸಿದ್ದು.
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುತ್ತಿದ್ದಂತೆ ಕರಾವಳಿ ಮಂದಿ ಫುಲ್ ಖುಷಿಯಾಗಿದ್ದರು. ಆಕೆಗೆ ಭಾರೀ ಬೆಂಬಲ ವ್ಯಕ್ತವಾಗಿತ್ತು. ಆದರೆ ಹೋದ ಕೆಲವೇ ಹೊತ್ತಲ್ಲಿ ಆಕೆಯನ್ನು ಟಾರ್ಗೆಟ್ ಮಾಡಿ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ ಕರಾವಳಿಗರು. ಅಲ್ಲದೇ ಕಮೆಂಟ್ ಗಳ ಸುರಿಮಳೆ ಸುರಿಸಿ ವಾಹಿನಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಆಂಕರ್ ಜಾನ್ವಿ ರಕ್ಷಿತಾ ಹಿನ್ನೆಲೆ ಗೊತ್ತಿಲ್ಲದೇ ಆಕೆಯನ್ನು ಅವಮಾನಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
- Advertisement -


