Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಸರ್ಕಲ್‌ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಸೇವಾ ನಿವೃತ್ತಿ

ಬೆಳ್ತಂಗಡಿ : ಸರ್ಕಲ್‌ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಸೇವಾ ನಿವೃತ್ತಿ

- Advertisement -
- Advertisement -

ಬೆಳ್ತಂಗಡಿ:ಜನಸ್ನೇಹಿ ಪೊಲೀಸ್ ಅಧಿಕಾರಿ ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಅವರು 33 ವರ್ಷ ಸುಧೀರ್ಘ ಕಾಲ ಸೇವೆ ಸಲ್ಲಿಸಿ ಸೆ.30(ಇಂದು)ರಂದು ಸೇವಾ ನಿವೃತ್ತಿಗೊಂಡಿದ್ದಾರೆ.

ನಾಗೇಶ್ ಕದ್ರಿ 1992 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಚೆನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯಲ್ಲಿ  ಮೂಲ ತರಬೇತಿ ಪಡೆದ ಇವರು ಸಿಬ್ಬಂದಿಯಾಗಿ ಮಂಗಳೂರು ಸಂಚಾರ ಪಶ್ಚಿಮ , ಬಜ್ಪೆ  ಪೊಲೀಸ್ ಠಾಣೆಯಲ್ಲಿ ಕರ್ತವ್ಯ ದಲ್ಲಿದ್ದ ಸಂದರ್ಭ 2003ರಲ್ಲಿ  ಪಿಎಸ್ಐ ಆಗಿ ನೇರ ನೇಮಕಾತಿಗೊಂಡು ಯಲಂಕ ಪೋಲಿಸ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಇವರು ಎಸ್ಐ ಆಗಿ  ಬೆಂಗಳೂರಿನ ವೈಯ್ಯಲಿಕಾವಲ್, ಉಪ್ಪಿನಂಗಡಿ, ದಕ್ಷಿಣ ಕನ್ನಡ ಅಬಕಾರಿ ಸ್ಕಾಡ್, ವೇಣೂರು, ಯಗಟಿ, ಪುತ್ತೂರು ಸಂಚಾರ, ಬಂಟ್ವಾಳ ನಗರ, ಸುಬ್ರಹ್ಮಣ್ಯ, ಕಾರವಾರ ಸಂಚಾರ ಹಾಗೂ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಸಲ್ಲಿಸಿದರು. 2015 ರಲ್ಲಿ ಪೋಲೀಸ್ ನಿರೀಕ್ಷಕರಾಗಿ ಪದ್ದನ್ನೋತಿಹೊಂದಿದ ಇವರು ದ.ಕ.ಜಿಲ್ಲಾ ವಿಶೇಷ ಘಟಕ, ಬೆಳ್ತಂಗಡಿ ವೃತ್ತ, ಮೈಸೂರು ಸಂಚಾರ, ಉಪ್ಪಿನಂಗಡಿ, ಡಿಸಿಐಬಿ ಮಡಿಕೇರಿ, ಐಜಿಪಿ ಕಚೇರಿ ಮಂಗಳೂರು, ಡಿಸಿಆರ್ ಬಿ ಕೊಡಗು, ಕಾರ್ಕಳ ನಗರ ಬೆಳ್ತಂಗಡಿ ಗ್ರಾಮಾಂತರ ವೃತ್ತದಲ್ಲಿ ಕರ್ತವ್ಯ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ್ದಾರೆ.

1965ರ ಸೆಪ್ಟೆಂಬರ್ 15 ರಂದು  ತುಕ್ರ ಮಡಿವಾಳ ಹಾಗೂ ಜಾನಕಿ ದಂಪತಿಗಳ ಪುತ್ರನಾಗಿ ಜನಿಸಿದರು. ಅರಣ್ಯ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಪತ್ನಿ ಕಲ್ಪನಾ ಹಾಗೂ ಉಪನ್ಯಾಸಕಿಯಾಗಿರುವ ಪುತ್ರಿ ಮೈತ್ರಿ ಮತ್ತು ಮಗ ಮಿತ್ರನ್ ವೈದ್ಯ ವೃತ್ತಿ ನಡೆಸುತ್ತಿದ್ದಾರೆ. ಇವರು ಮೂಡುಬಿದಿರೆಯ ರತ್ನಾಕರ ವರ್ಣಿ ನಗರದಲ್ಲಿ ನೆಲೆಸಿದ್ದಾರೆ. ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕದ್ರಿಯಲ್ಲಿ ಹಾಗೂ ಪ್ರೌಢ ಶಿಕ್ಷಣ ಗಣಪತಿ ಹೈಸ್ಕೂಲ್ ಹಂಪನಕಟ್ಟೆ, ಪಿಯುಸಿ ಸರ್ಕಾರಿ ಕಾಲೇಜು ಮಂಗಳೂರು ಹಾಗೂ ಪದವಿ ವಿದ್ಯಾಭ್ಯಾಸವನ್ನು ಮಂಗಳೂರು ಸೈಂಟ್ ಅಲೋಶಿಯಸ್ ಇವಿನಿಂಗ್ ಕಾಲೇಜಿನಲ್ಲಿ ಪೂರೈಸಿದ್ದಾರೆ.

ದಕ್ಷ, ಪ್ರಾಮಾಣಿಕ, ಜನಸ್ನೇಹಿ ಅಧಿಕಾರಿಯಾಗಿ , ಸಿಬ್ಬಂದಿಯೊಂದಿಗೆ  ಉತ್ತಮ ಭಾಂದವ್ಯ ಹೊಂದಿದರು. ಕಳ್ಳತನ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದರು.

- Advertisement -

Latest News

error: Content is protected !!