- Advertisement -
![]()
- Advertisement -
ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಸಮೀಕ್ಷಾದಾರರಿಗೆ ಗೌರವ ಧನ ಬಿಡುಗಡೆ ಮಾಡಲಾಗಿದೆ.
ಆಯೋಗದ ಠೇವಣಿ ಖಾತೆಯಿಂದ ಡಿಸಿ ಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಒಟ್ಟು ಒಂದು ಲಕ್ಷದ 20 ಸಾವಿರದ 728 ಸಮೀಕ್ಷಾದಾರರಿಗೆ ಗೌರವ ಧನ ಬಿಡುಗಡೆಯಾಗಿದೆ.
ಮೊದಲನೇ ಕಂತಿನಲ್ಲಿ ಸಮೀಕ್ಷಾಧಾರರಿಗೆ ಗೌರವ ಧನ ತಲಾ ಐದು ಸಾವಿರ ರೂಪಾಯಿಗಳಂತೆ, ಪ್ರತಿ ಮನೆಗೆ 100 ರೂಪಾಯಿಯಂತೆ ಮತ್ತು ಮೇಲ್ವಿಚಾರಕರಿಗೆ 10 ಸಾವಿರ ರೂಪಾಯಿಯಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಒಟ್ಟು 60 ಕೋಟಿ 36 ಲಕ್ಷದ 40 ಸಾವಿರ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ.
ಇದರ ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ನಿಗಮಗಳ ಪಿ.ಡಿ. ಖಾತೆಗಳಲ್ಲಿ ಲಭ್ಯವಿರುವ ಹಣ 348.36 ಕೋಟಿ ರೂಪಾಯಿ ಹಣವನ್ನು ಸಮೀಕ್ಷೆಯ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಮೋದನೆ ನೀಡಲಾಗಿದೆ.
- Advertisement -


