Wednesday, June 24, 2026
Homeಕರಾವಳಿಉಡುಪಿದಸರಾ ಹಬ್ಬಕ್ಕೆ ಬೆಂಗಳೂರಿಂದ ಮಂಗಳೂರಿಗೆ ವಿಶೇಷ ರೈಲು

ದಸರಾ ಹಬ್ಬಕ್ಕೆ ಬೆಂಗಳೂರಿಂದ ಮಂಗಳೂರಿಗೆ ವಿಶೇಷ ರೈಲು

- Advertisement -
- Advertisement -

ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಮಂಗಳೂರಿಗೆ ಒಂದು ಟ್ರಿಪ್ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ.ಯಶವಂತಪುರ-ಮಂಗಳೂರು ವಿಶೇಷ ರೈಲು ಸೆಪ್ಟೆಂಬರ್ 30 ರಂದು ಒಂದು ಟ್ರಿಪ್ ಕಾರ್ಯಾಚರಣೆ ನಡೆಸಲಿದೆ.

ನಂ. 06257 ಯಶವಂತಪುರ ಜಂಕ್ಷನ್ ಮಂಗಳೂರು ಜಂಕ್ಷನ್ ಉತ್ಸವ ವಿಶೇಷ ರೈಲು ಸೆ. 30 ಮಂಗಳವಾರದಂದು ರಾತ್ರಿ ಗಂಟೆ 11.55ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.ಅಕ್ಟೋಬರ್ 1 ರಂದು ಬುಧವಾರದಂದು ಮಧ್ಯಾಹ್ನ 2.35ಕ್ಕೆ ಮಂಗಳೂರಿನಿಂದ ಹೊರಡುವ ನಂ. 06258 ಮಂಗಳೂರು ಜಂಕ್ಷನ್ ಯಶವಂತಪುರ ಜಂಕ್ಷನ್ ವಿಶೇಷ ರೈಲು ಅದೇ ರಾತ್ರಿ 11.30ಕ್ಕೆ ಯಶವಂತಪುರ ತಲುಪಲಿದೆ.

ದಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ರೈಲ್ವೇ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಕಚೇರಿ ಮಾಹಿತಿ ನೀಡಿದೆ.

- Advertisement -

Latest News

error: Content is protected !!