
ಮಂಗಳೂರು: ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯ ರೌಡಿ ಶೀಟರ್ ನಜೀಮ್ @ ನಜ್ಜು (30) ಬಂಧಿತ.ಬೆಂಗಳೂರು ನಗರದಿಂದ ಬಂಧಿಸಲಾಗಿದೆ.
ಆರೋಪಿಯ ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದು, ಕೊಲೆ, ಸುಲಿಗೆ, ದಾಳಿ, ಎನ್.ಡಿ.ಪಿಎಸ್ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ.
ಬಂಟ್ವಾಳ ತಾಲೂಕು ನರಿಗಾನ ಗ್ರಾಮದ ಪಟ್ಟುಲಿಕೆ ವಾಸವಾಗಿರುವ ನಜೀಮ್ @ ನಜ್ಜು ಮೇಲೆ ಕೊಣಾಜೆ, ಉಳ್ಳಾಲ, ಮಂಗಳೂರು ನಾರ್ತ್, ಬೇಗೂರು ಬೆಂಗಳೂರು ನಗರ, ಭಟ್ಕಳ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಆರೋಪಿ ಜಾಮೀನು ಪಡೆದ ಬಳಿಕ ಒಂದೂವರೆ ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದನು.
ನಜೀಮ್ ವಿರುದ್ಧ ಹೊರಡಿಸಲಾಗಿದ್ದ ವಾರೆಂಟ್ ಹಾಗೂ ಪ್ರೋಕ್ಲಮೇಷನ್ ಬಾಕಿ ಇದ್ದ ಹಿನ್ನೆಲೆಯಲ್ಲಿ, ವಿಶೇಷ ಕ್ರಮ ಕೈಗೊಂಡು ಆರೋಪಿಯನ್ನು ಬೆಂಗಳೂರು ನಗರದಿಂದ ಪತ್ತೆಹಚ್ಚಿ ಬಂಧಿಸಲಾಗಿದೆ.
ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಕರಣಗಳು:
- ಅ.ಕ್ರ 326/2015, ಉಳ್ಳಾಲ ಪೊಲೀಸ್ ಠಾಣೆ – ಸೆ. 143, 147, 148, 447, 448, 504, 341, 307, 506, 109 r/w 149 IPC (PT)
- ಅ.ಕ್ರ 161/2016, ಕೊಣಾಜೆ ಪೊಲೀಸ್ ಠಾಣೆ – ಸೆ. 143, 147, 148, 341, 504, 506, 307 r/w 149 IPC (ಖುಲಾಸೆ)
- ಅ.ಕ್ರ 142/2019, ಭಟ್ಕಳ ಪೊಲೀಸ್ ಠಾಣೆ – 302, 201 IPC (ಪ್ರೋಕ್ಲಮೇಷನ್) (PT)
- ಅ.ಕ್ರ 125/2021, ಕೊಣಾಜೆ ಪೊಲೀಸ್ ಠಾಣೆ – 143, 147, 148, 504, 324, 323 r/w 149 IPC (PT)
- ಅ.ಕ್ರ 43/2022, ಕೊಣಾಜೆ ಪೊಲೀಸ್ ಠಾಣೆ – 447, 324, 504, 506 IPC (PT)
- ಅ.ಕ್ರ 54/2022, ಮಂಗಳೂರು ನಾರ್ತ್ ಪೊಲೀಸ್ ಠಾಣೆ – 323, 324, 397, 365, 342 r/w 34 IPC (PT)
- ಅ.ಕ್ರ 187/2022, ಬೇಗೂರು ಪೊಲೀಸ್ ಠಾಣೆ, ಬೆಂಗಳೂರು ನಗರ– 20(b), ಎನ್‌ಡಿಪಿಎಸ್ ಕಾಯ್ದೆ (PT)
- ಅ.ಕ್ರ 85/2023, ಉಳ್ಳಾಲ ಪೊಲೀಸ್ ಠಾಣೆ – ಸೆ. 8(c), 21, 21(c) ಎನ್‌ಡಿಪಿಎಸ್ ಕಾಯ್ದೆ (PT)


