ಬೆಳ್ತಂಗಡಿ: ಸವಣಾಲು ಗ್ರಾಮದ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ, ಕಾಳಿಬೆಟ್ಟದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವವು 22/09/2025 ನೇ ಸೋಮವಾರದಿಂದ 02/10/2025ನೇ ಗುರುವಾರದವರೆಗೆ ನಡೆಯಲಿದೆ.
ನವರಾತ್ರಿ ಉತ್ಸವದ ಪ್ರತಿದಿನ ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ, ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ತಾ. 02/10/2025, ಗುರುವಾರ ಸಾರ್ವಜನಿಕ ಚಂಡಿಕಾಹೋಮ ಮತ್ತು ಅನ್ನಸಂತರ್ಪಣೆ ನಡೆಯಲಿರುವುದು.
ತಾ. 29/09/2025, ಸೋಮವಾರ ದಂದು ಶ್ರೀ ಶಾರದ ಪೂಜೆ, ಅಕ್ಷರಭ್ಯಾಸ ( ಬೆಳಿಗ್ಗೆ 09.00 ರಿಂದ 11.00 ಗಂಟೆಯ ವರೆಗೆ ) ನಡೆಯಲಿರುವುದು. ತಾ. 30/09/2025, ಮಂಗಳವಾರ ದಂದು ಬೆಳಗ್ಗೆ 09:00 ಗಂಟೆಗೆ ಶ್ರೀ ಕಾಳಿಗುಡಿಯಲ್ಲಿ ತೆನೆ ಪೂಜೆ, ಮಧ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ ಹೂವಿನ ಪೂಜೆ, ಅಷ್ಟಾವದಾನ, ರಂಗಪೂಜೆ, ವಾಹನ ಪೂಜೆ ಜರಗಲಿರುವುದು. ತಾ. 01/10/2025, ಬುಧವಾರದಂದು ಸಂಜೆ 05:00 ಗಂಟೆಯಿಂದ ವಾಹನ ಪೂಜೆ, ಶ್ರೀ ಮೂಲದುರ್ಗಾ ದೇವಿಗೆ ರಾತ್ರಿ ಅಷ್ಟಾವದಾನ ಸೇವೆ, ಹೂವಿನ ಪೂಜೆ, ರಂಗ ಪೂಜೆ ನಡೆಯಲಿದೆ.
ತಾ. 02/10/2025, ಶುಕ್ರವಾರ ಸಾರ್ವಜನಿಕ ಚಂಡಿಕಾಹೋಮ ಮತ್ತು ಅನ್ನಸಂತರ್ಪಣೆ ನಡೆಯಲಿರುವುದು. ಶ್ರೀ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಭಾಗವಹಿಸಿ, ಶ್ರೀ ದುರ್ಗಾಕಾಳಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ.
ವಿಶೇಷ ಸೂಚನೆ: ಸಾರ್ವಜನಿಕ ಚಂಡಿಕಾಹೋಮ (₹500/- ಮಾತ್ರ) ಮಾಡಲಿಚ್ಛಿಸುವವರು ತಾ. 02/10/2025ರ ಬೆಳಗ್ಗೆ 11:00 ಗಂಟೆಯ ಒಳಗೆ ತಮ್ಮ ಹೆಸರನ್ನು ಕಚೇರಿಯಲ್ಲಿ ನೊಂದಾಯಿಸುವುದು.
- ನವರಾತ್ರಿಯ ದಿನ ವಿಶೇಷ ರಂಗಪೂಜೆ (₹1,500/-) ಮಾಡಿಸುವವರು ಮುಂಚಿತವಾಗಿ ಕಚೇರಿಯಲ್ಲಿ ತಿಳಿಯತಕ್ಕದ್ದು. ಸಾರ್ವಜನಿಕ ರಂಗಪೂಜೆ (₹1,000/-)
- ನವರಾತ್ರಿಯ ದಿನ ದೇವಿ ಪಾರಾಯಣ (ಒಂದು ದಿನ – ₹500/-) ಮಾಡಿಸುವವರು ಕ್ಷೇತ್ರದ ಕಚೇರಿಯಲ್ಲಿ ರಶೀದಿಯನ್ನು ಪಡೆಯಬೇಕಾಗಿ ವಿನಂತಿ.
- ಶ್ರೀ ಕ್ಷೇತ್ರದ ಸಂಸ್ಥಾಪಕರು, ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಅರ್ಚಕ ವೃಂದ ಮತ್ತು ಸಿಬ್ಬಂದಿ ವರ್ಗ, ಶ್ರೀ ಕ್ಷೇತ್ರ ಸವಣಾಲು.


