Saturday, June 6, 2026
Homeಕರಾವಳಿಹೈಕೋರ್ಟ್ ನಲ್ಲಿ ರಿಟ್ ಅರ್ಜಿ ವಿಚಾರಣೆ: ಬುರುಡೆ ಗ್ಯಾಂಗ್ ವಿರುದ್ಧ ವಾದ ಮಂಡಿಸಿದ ಸರ್ಕಾರದ ವಕೀಲ...

ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ವಿಚಾರಣೆ: ಬುರುಡೆ ಗ್ಯಾಂಗ್ ವಿರುದ್ಧ ವಾದ ಮಂಡಿಸಿದ ಸರ್ಕಾರದ ವಕೀಲ ಜಗದೀಶ್

- Advertisement -
- Advertisement -

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸಮಾಧಿ ಶೋಧಕ್ಕೆ ಸಂಬಂಧಿಸಿದಂತೆ ಪುರಂದರ ಗೌಡ ಹಾಗೂ ತುಕಾರಾಂ ಗೌಡ ಹೈಕೋರ್ಟ್​ಗೆ ತಾವು ಗುರುತಿಸಿರುವ ಸ್ಥಳಗಳಲ್ಲಿ ಭೂಮಿ ಅಗೆದು ಸಮಾಧಿ ಶೋಧ ಮಾಡುವಂತೆ ರಿಟ್ ಅರ್ಜಿ ಸಲ್ಲಿಸಿದ್ದು, ಇಂದು (ಸೆ 18 ಗುರುವಾರ ದಂದು) ಹೈಕೋರ್ಟ್ ರಿಟ್ ಅರ್ಜಿಯನ್ನು ಬಗ್ಗೆ ವಿಚಾರಣೆ ನಡೆಸಿತು.

ರಿಟ್ ಅರ್ಜಿಯನ್ನ ಪರಿಶೀಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ದೂರುದಾರ ಚಿನ್ನಯ್ಯ ಹೇಳಿದ್ದನ್ನ ಬಿಟ್ಟು ನಿಮ್ಮ ಬಳಿ ಬೇರೆ ಮಾಹಿತಿ ಎನಿದೆ..? ‘ಚಿನ್ನಯ್ಯನ ಬಳಿ ಇಲ್ಲದಿರೋ ಹೆಚ್ಚುವರಿ ಮಾಹಿತಿ ನಿಮ್ಮ ಬಳಿ ಏನಿದೆ ಹೇಳಿ?. ಇನ್ನು ನಿಮಗೆ ಅವಕಾಶ ಕೊಟ್ಟರೆ ಮತ್ತಷ್ಟು ಜನ ಮಾಹಿತಿ ಗೊತ್ತು ಅಂತ ಬರಬಹುದು. ಹೆಚ್ಚುವರಿ ಮಾಹಿತಿ ಏನಿದೆ ಹೇಳಿ..? ಮಾಹಿತಿ ಕೊಟ್ಟ ಬಳಿಕ ನಿಮ್ಮ ವಾದ ಕೇಳ್ತೀವಿ. ಚಿನ್ನಯ್ಯ ಹೇಳಿದ್ದಕ್ಕಿಂತ ಹೆಚ್ಚಿನ ಮಾಹಿತಿ ಏನಿದೆ ಎಂದು ದೂರುದಾರರ ಪರ ವಕೀಲ ದೀಪಕ್​ಗೆ ಪ್ರಶ್ನಿಸಿದರು.

ಈ ಸಂಧರ್ಭದಲ್ಲಿ ಮತ್ತಷ್ಟು ಸಮಾಧಿ ಶೋಧಕ್ಕೆ ಮನವಿ ಮಾಡಿದ್ದ ಅರ್ಜಿ ಹೈವೋಲ್ಟೇಜ್ ವಿಚಾರಣೆಯು ನಡೆದಿದ್ದು, ಸರ್ಕಾರದ ಪರ ವಕೀಲ ಬಿ.ಎನ್ ಜಗದೀಶ್ಅನನ್ಯಾ ಭಟ್ ನಾಪತ್ತೆ ಕೇಸ್ ಉಲ್ಲೇಖಿಸಿvಹೈಕೋರ್ಟ್​ನಲ್ಲಿ ತನಿಖೆ ವಿವರವನ್ನ ಬಿಚ್ಚಿಟ್ಟರು. “ಅನನ್ಯಾ ಭಟ್ ನಾಪತ್ತೆ ಅಂತ ಸುಜಾತ ಭಟ್ ಎನ್ನುವವರು ಬಂದಿದ್ದರು. ವಿಚಾರಣೆ ಬಳಿಕ ಅನನ್ಯಾ ಭಟ್ ಅಂತ ಯುವತಿ ಇರಲಿಲ್ಲ ಎಂದು ಗೊತ್ತಾಯ್ತು. ಪೋಟೋದಲ್ಲಿದ್ದ ಮಹಿಳೆ‌ ಈಗಾಗಲೇ ಮೃತಪಟ್ಟಿದ್ದಾಳೆ ಎಂದು ಗೊತ್ತಾಯ್ತು. ಇನ್ನುಆ ಮಹಿಳೆ ಪರವಾಗಿ ವಕೀಲರು ಪ್ರೆಸ್ ನೋಟ್ ರಿಲೀಸ್ ಮಾಡಿದ್ದಾರೆ. ಇಲ್ಲಿ ಏನ್ ನಡೀತಾ ಇದೆ ಅನ್ನೋದು ಗೊಂದಲಮಯ ಎಂದು ಜಗದೀಶ್ ವಾದಿಸಿದರು. ಹಾಗೆಯೇ ಮತ್ತಷ್ಟು ಸಮಾಧಿ ಶೋಧಕ್ಕೆ ಅವಕಾಶ ನೀಡಬೇಡಿ ಎಂದು ಹೇಳಿದರು.

‘ಧರ್ಮಸ್ಥಳದ ವಿರುದ್ಧದ ಕೇಸ್​ನಲ್ಲಿ ದೊಡ್ಡ ಷಡ್ಯಂತ್ರವೇ ನಡೆದಿದೆ. ಮೂಲ ದೂರುದಾರ ಚಿನ್ನಯ್ಯನ ಹಿಂದೆ ಇದ್ದ ಷಡ್ಯಂತ್ರ ಕೂಡ ಬಯಲಾಗಿದೆ.ಜಡ್ಜ್​ ಮುಂದೆ ಮೊದಲು ಕೊಟ್ಟ ಹೇಳಿಕೆ ಸುಳ್ಳು ಅನ್ನೋದು ಕೂಡ ಬಯಲಾಗಿದ್ದು, ಚಿನ್ನಯ್ಯನ ಜತೆಗಿದ್ದ ವಕೀಲರು ಸುಳ್ಳು ಮಾಹಿತಿಯ ಪ್ರೆಸ್​​ನೋಟ್ ಕೊಟ್ಟಿದ್ದಾರೆ. 2014ರ ವರೆಗೆ ಚಿನ್ನಯ್ಯ ಧರ್ಮಸ್ಥಳದಲ್ಲಿ ಕಸಗುಡಿಸೋ ಕೆಲಸ ಮಾಡ್ತಾ ಇದ್ದ. ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ ಅಂತ ಬಂದಿದ್ದಾಗಿ ಆರಂಭದಲ್ಲಿ ಹೇಳಿಕೆ ಕೊಟ್ಟಿದ್ದ. 2 ವರ್ಷದ ಹಿಂದೆಯೇ ಚಿನ್ನಯ್ಯ ಧರ್ಮಸ್ಥಳಕ್ಕೆ ಬಂದು ಹೋಗಿದ್ದು ಗೊತ್ತಾಗಿದೆ ಎಂದು ಬುರುಡೆ ಗ್ಯಾಂಗ್ ಷಡ್ಯಂತ್ರದ ಬಗ್ಗೆ ಹೈಕೋರ್ಟ್​ ಮುಂದೆ ಸರ್ಕಾರದ ವಕೀಲ ಮಾಹಿತಿ ನೀಡಿದರು.

‘ಇಬ್ಬರು ವ್ಯಕ್ತಿಗಳು ತಲೆ ಬುರುಡೆ ಕೊಟ್ಟಿದ್ದನ್ನು ಚಿನ್ನಯ್ಯ ಒಪ್ಪಿಕೊಂಡಿದ್ದಾನೆ. ಇನ್ನು ಚಿನ್ನಯ್ಯ ಹೇಳಿದ 13 ಕಡೆ ಅಗೆದರೂ ಅಸ್ಥಿಪಂಜರ ಸಿಕ್ಕಿದ್ದು ಒಂದು ಕಡೆ ಮಾತ್ರ. ಧರ್ಮಸ್ಥಳದಲ್ಲಿ ಎರಡು ಕಡೆ ಸಿಕ್ಕ ಮೂಳೆಗಳು ಪುರುಷನದ್ದು ಎಂದು ಗೊತ್ತಾಗಿದೆ ಎಂದುಎಸ್​ಐಟಿ ಮುಂದೆ ಧರ್ಮಸ್ಥಳದ ವಿರೋಧಿ ಷಡ್ಯಂತ್ರವನ್ನು ಸರ್ಕಾರಿ ವಕೀಲರು ಹಂತ ಹಂತವಾಗಿ ಬಿಚ್ಚಿಟ್ಟರು.

- Advertisement -

Latest News

error: Content is protected !!