- Advertisement -


- Advertisement -
ಬೆಳ್ತಂಗಡಿ : ಸೌಜನ್ಯ ಮಾವ ವಿಠಲ ಗೌಡ ಅವರ ವಿರುದ್ದ ಧರ್ಮಸ್ಥಳ ನಿವಾಸಿ ಸಂದೀಪ್ ರೈ ಅವರು ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಸೆ.18 ರಂದು ತೆರಳಿ ದೂರು ನೀಡಿದ್ದಾರೆ.
ಎಸ್.ಐ.ಟಿ ವಿಚಾರಣೆ ಮುಗಿಸಿ ಬಂದ ವಿಠಲ ಗೌಡ ತಾನು ಹಲವಾರು ಮೃತದೇಹಗಳ ಅವಶೇಷಗಳನ್ನು ನೋಡಿರುವುದಾಗಿ ಹೇಳಿಕೆ ನೀಡಿ ಇಡೀ ತನಿಖೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಬಂಗ್ಲೆ ಗುಡ್ಡೆಯಲ್ಲಿ ವಾಮಾಚಾರ ನಡೆದಿದೆ ಎಂಬಂತಹ ಹೇಳಿಕೆಯನ್ನು ನೀಡಿ ಜನರಲ್ಲಿ ಭಯ ಮೂಡಿಸುವ ಕಾರ್ಯ ಮಾಡಿದ್ದಾನೆ, ಇದರ ಹಿಂದೆ ಯಾವುದೋ ಸಂಚು ಇದೆ. ಈ ಹಿನ್ನಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸಬೇಕು ಇಡೀ ಪ್ರಕರಣದ ಸಂಚಿನಲ್ಲಿ ವಿಠಲ ಗೌಡ ಭಾಗಿಯಾಗಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಎಸ್.ಐ.ಟಿ ಗೆ ದೂರು ನೀಡಿದ್ದಾರೆ.
ದೂರನ್ನು ಸ್ವೀಕರಿಸಿರುವ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿರುವುದಾಗಿ ಸಂದೀಪ್ ರೈ ಮಾಹಿತಿ ನೀಡಿದ್ದಾರೆ.
- Advertisement -


