Wednesday, June 24, 2026
Homeಆರಾಧನಾಭಜನೆಯ ಜೊತೆಗೆ ವೃಕ್ಷ, ಗೋವುಗಳ ಸಂರಕ್ಷಣೆ ಮಾಡಲಾಗಿದೆ: ಜೀವನ ಶಿಸ್ತಿಗೆ ಭಜನೆ ಪೂರಕ: ವೀರೇಂದ್ರ ಹೆಗ್ಗಡೆ

ಭಜನೆಯ ಜೊತೆಗೆ ವೃಕ್ಷ, ಗೋವುಗಳ ಸಂರಕ್ಷಣೆ ಮಾಡಲಾಗಿದೆ: ಜೀವನ ಶಿಸ್ತಿಗೆ ಭಜನೆ ಪೂರಕ: ವೀರೇಂದ್ರ ಹೆಗ್ಗಡೆ

- Advertisement -
- Advertisement -

ಧರ್ಮಸ್ಥಳ: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪದಾಧಿಕಾರಿಗಳ ವಾರ್ಷಿಕ ಸಭೆಯಲ್ಲಿ ಪೂಜ್ಯ ಹೆಗ್ಗಡೆಯವರು ಭಜನೆಯ ಜೊತೆಗೆ ವೃಕ್ಷ, ಗೋವುಗಳ ಸಂರಕ್ಷಣೆ ಮಾಡಲಾಗಿದೆ. ಜೀವನ ಶಿಸ್ತಿಗೆ ಭಜನೆ ಪೂರಕ ಎಂದು ಮಾರ್ಗದರ್ಶಕ ನುಡಿಗಳನ್ನು ನುಡಿದರು.

“ಊರಿನ ಶಾಲೆಯವರಿಗೆ ಸ್ಪಂದಿಸಬೇಕು. ಇದು ಪರಿಷತ್ ಉದ್ದೇಶ. ಭಜನಾ ಕಮ್ಮಟ ಉತ್ತಮವಾಗಿ ನಡೆಯುತ್ತಿದೆ. ಗಣೇಶೋತ್ಸವದಲ್ಲಿ ಡಿ.ಜೆ.ಸೌಂಡ್‌ನ ಬದಲಿಗೆ ಭಜನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.ಜೀವನ ಶಿಸ್ತಿಗೆ ಭಜನೆ ಪೂರಕ, ಬೀಡಿಯ ಹೊಗೆ ಹೋಗಿ ಅಗರಬತ್ತಿಯ ಪರಿಮಳ ವಿಸ್ತಾರ ಆಗುತ್ತಿದೆ.ಧಾರ್ಮಿಕ ಕಾರ್ಯಕ್ರಮದಲ್ಲಿ ಶಿಸ್ತು ಬರಬೇಕು. ಸತ್ಕಾರಗಳು ಉತ್ತಮವಾಗಿ ನಡೆಯಬೇಕು,” ಎಂದು ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರೇರಕ ಮಾತುಗಳನ್ನಾಡಿದರು.

ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರು, “ಭಜನಾ ಪರಿಷತ್ ಉತ್ತಮವಾಗಿ ಕೆಲಸ ಮಾಡುತ್ತಿದೆ. 1894 ಭಜನಾ ಮಂಡಳಿಗಳಿದ್ದು 45000 ಮಂದಿ ಭಜಕರಿದ್ದಾರೆ. 2ಜನ ಸಮನ್ವಯಾಧಿಕಾರಿಗಳನ್ನು ಕ್ಷೇತ್ರದ ಧರ್ಮೋತ್ಥಾನ ಟ್ರಸ್ಟ್‌ನಿಂದ ನಿಯೋಜನೆ ಮಾಡಲಾಗಿದೆ. ಪರಿಷತ್ ಇನ್ನು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಮಾರ್ಗದರ್ಶನ ಮಾಡಿದರು.ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀ ಮಹಾಲಕ್ಷ್ಮೀ ಪ್ರತಿಷ್ಠಾನ, ಶ್ರೀಧಾಮ ಮಾಣಿಲ ಇವರು ಪರಿವರ್ತನೆ ಜಗತ್ತಿನ ನಿಯಮ,” ಎಂದು ನುಡಿದರು.

ಶ್ರೀ ಚಂದ್ರಶೇಖರ್ ಸಾಲ್ಯಾನ್, ಅಧ್ಯಕ್ಷರು, ರಾಜ್ಯ ಭಜನಾ ಪರಿಷತ್ ಇವರು ಸ್ವಾಗತಿಸಿದರು. ಶ್ರೀ ಜಿ. ಸುಬ್ರಹ್ಮಣ್ಯ ಪ್ರಸಾದ್, ಸಂಚಾಲಕರು, ಭಜನಾ ಕಮ್ಮಟ ಇವರು ಪ್ರಸ್ತಾವಿಕ ಮಾತುಗಳನ್ನಾಡಿದರು.

ಶ್ರೀ ಶ್ರೀನಿವಾಸ್ ರಾವ್, ಶ್ರೀ ಸತೀಶ್ ಸುಳ್ಯ, ಶ್ರೀ ಲೋಕೇಶ್ ಬೆತ್ತೋಡಿ ಅನಿಸಿಕೆ ವ್ಯಕ್ತಪಡಿಸಿದರು.ಸಂತೋಷ್ ಪಿ. ಅಳಿಯೂರು. ಸಮನ್ವಯಾಧಿಕಾರಿ, ಭಜನಾ ಪರಿಷತ್ ಕಾರ್ಯಕ್ರಮ ನಿರೂಪಿಸಿ, ರವೀಂದ್ರ ವಂದಿಸಿದರು. ವೇದಿಕೆಯಲ್ಲಿ ಭಜನಾ ಕಮ್ಮಟದ ಕಾರ್ಯದರ್ಶಿ ಶ್ರೀ ವೀರು ಶೆಟ್ಟಿ ಹಾಗೂ ಸದಸ್ಯರಾದ ಶ್ರೀ ಮಹಾವೀರ ಅತ್ರಿ ಇವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!