Friday, June 26, 2026
Homeಅಪರಾಧಶಬರಿಮಲೆ ದೇವಸ್ಥಾನದ ವಿಗ್ರಹದಿಂದ ಚಿನ್ನ ನಾಪತ್ತೆ!; ಹೈಕೋರ್ಟ್ ನಿಂದ ತನಿಖೆಗೆ ಆದೇಶ

ಶಬರಿಮಲೆ ದೇವಸ್ಥಾನದ ವಿಗ್ರಹದಿಂದ ಚಿನ್ನ ನಾಪತ್ತೆ!; ಹೈಕೋರ್ಟ್ ನಿಂದ ತನಿಖೆಗೆ ಆದೇಶ

- Advertisement -
- Advertisement -

ತಿರುವನಂತಪುರಂ: ಕೇರಳ ಹೈಕೋರ್ಟ್ ಶಬರಿಮಲೆ ದೇವಸ್ಥಾನದಲ್ಲಿನ ದ್ವಾರಪಾಲಕ ವಿಗ್ರಹಗಳ ಚಿನ್ನದ ಹೊದಿಕೆಯ ಬಗ್ಗೆ ತನಿಖೆ ನಡೆಸುವಂತೆ ಆದೇಶವನ್ನು ನೀಡಿದೆ.

ದ್ವಾರಪಾಲಕ ವಿಗ್ರಹಗಳ ತಾಮ್ರದ ತಗಡುಗಳಿಂದ ಚಿನ್ನ ಕಳೆದುಹೋದ ಬಗ್ಗೆ ತನಿಖೆಗೆ ಆದೇಶವನ್ನು ನೀಡಿದ್ದು, ಇದಕ್ಕೆ ಕಾರಣ 2019 ರಲ್ಲಿ ಹೊಸ ಚಿನ್ನದ ಲೇಪನಕ್ಕಾಗಿ ತಟ್ಟೆಗಳನ್ನು ತೆಗೆದಾಗ, ಅವುಗಳ ತೂಕ 42.8 ಕೆಜಿ ಇತ್ತು, ಆದರೆ ಚೆನ್ನೈ ಮೂಲದ ಸಂಸ್ಥೆಯು ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೊದಲು ಪರೀಕ್ಷೆ ಮಾಡಿದಾಗ ಕೇವಲ 38.258 ಕೆಜಿ ಮಾತ್ರ ಇತ್ತು, ಸುಮಾರು 4.54 ಕೆಜಿ ಕೊರತೆ ಇತ್ತು ಎಂದು ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ.ವಿ. ಜಯಕುಮಾರ್ ಅವರ ಪೀಠವು ಗಮನಿಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು 1999 ರಲ್ಲಿ ದ್ವಾರಪಾಲಕ ವಿಗ್ರಹಗಳನ್ನು ಮೂಲತಃ ಅಧಿಕೃತ ಅನುಮೋದನೆಯ ಆಧಾರದ ಮೇಲೆ ಸ್ಥಾಪಿಸಲಾಗಿದ್ದು, ಒಟ್ಟಾಗಿ 40 ವರ್ಷಗಳ ಖಾತರಿಯೊಂದಿಗೆ ಇದನ್ನು ಮಾಡಲಾಗಿದೆ ಎಂದು ನ್ಯಾಯಾಲಯವು ಗಮನಿಸಿತು. ಆದರೆ, ಕೇವಲ ಆರು ವರ್ಷಗಳಲ್ಲಿ ಲೇಪನದಲ್ಲಿ ದೋಷಗಳು ಕಂಡು ಬಂದಿತ್ತು ಎಂದು ತಿಳಿಸಲಾಗಿದೆ.

ತಿರುವಾಂಕೂರು ದೇವಸ್ವಂ ಮಂಡಳಿ ದ್ವಾರಪಾಲಕ ವಿಗ್ರಹಗಳನ್ನು ಮುಚ್ಚಿದ್ದ ಚಿನ್ನದ ಲೇಪಿತ ತಾಮ್ರದ ತಗಡುಗಳನ್ನು 2019 ರಲ್ಲಿ ದುರಸ್ತಿಮಾಡುವ ಹಾಗೂ ಮರು-ಸುವರ್ಣೀಕರಣಕ್ಕಾಗಿ ನ್ಯಾಯಾಲಯದಿಂದ ಪೂರ್ವ ಸೂಚನೆ ಮೇರೆಗೆ ತೆಗೆದುಹಾಕಿದಾಗ ಈ ವಿವಾದ ಪ್ರಾರಂಭವಾಯಿತು.

ಇದೀಗ ಕೇರಳ ಹೈಕೋರ್ಟ್ ತನಿಖೆಗೆ ಆದೇಶ ನೀಡಿದ್ದು ಪ್ರಕರಣವನ್ನ ಎಲ್ಲಾ ರಿಜಿಸ್ಟರ್‌ಗಳನ್ನು ವಿಜಿಲೆನ್ಸ್ ಅಧಿಕಾರಿಗೆ ಹಸ್ತಾಂತರಿಸುವಂತೆ ಆದೇಶಿಸಿದೆ. ಹಾಗೆಯೇ ಟಿಡಿಬಿಗೆ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಿದೆ ಎನ್ನಲಾಗಿದೆ.

- Advertisement -

Latest News

error: Content is protected !!