ಮಂಜೇಶ್ವರದ ವರ್ಕಾಡಿ ಕೊಡ್ಲಮೊಗರಿನ ಪಲ್ಲೆದಡ್ಪುವಿನಲ್ಲಿ ಕೊಡ್ಲಮೊಗರು ಗ್ರಾಮ ಕ್ಷೇತ್ರದಲ್ಲಿ ಶ್ರೀ ಗೋಪಾಲಕೃಷ್ಣದೇವರ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮವು ಬಹಳ ವೈಭವದಿಂದ ಜರುಗಿತು.
ಶ್ರೀ ಗೋಪಾಲಕೃಷ್ಣದೇವರ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ರಹ್ಮಶ್ರೀ ವೇದಮೂರ್ತಿ ವರ್ಕಾಡಿ ದಿನೇಶ್ ಕೃಷ್ಣ ತಂತ್ರಿ ನೇತೃತ್ವದಲ್ಲಿ ಪ್ರತಿಷ್ಠೆ ನಡೆಯಿತು.
ಕಣಂತೂರು ವೈದ್ಯನಾಥ ಕ್ಷೇತ್ರದ ಆಡಳಿತ ಮೊಕ್ತಸರ ದೇವಿಪ್ರಸಾದ್ ಪೊಯ್ಯತ್ತಾಯ, ಅರ್ಚಕ ವಿಷ್ಣುಪ್ರಸಾದ್ ಭಟ್, ಸತೀಶ್ ಆಳ್ವ ಮಡ್ಡಬೀಡು, ಸೋಮನಾಥ ಕಾರಂತ, ಶ್ರೀ ಗೋಪಾಲಕೃಷ್ಣ ದೇವರ ರಕ್ಷಾ ಕಮಿಟಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಊರ ಪರವೂರ ಹತ್ತು ಸಮಸ್ತರು, ಪಾತೂರುಬೀಡು ಕುಶಲ ಕುಮಾರ್ ಪಾತುರಾಯ ಕೊಡ್ಲಮೊಗರು, ಕೊಂಡೆವೂರು ಅನಂತ ಪದ್ಮನಾಭ ದೇವಸ್ಥಾನದ ಆಡಳಿತ ಮೊಕೇಸರ ಐತಪ್ಪ ಶೆಟ್ಟಿ ದೇವಂದಪದ್ಪು, ನಾರಾಯಣ ಕೊಣಾಜೆ, ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸುಧಾಕರ್ ಕೆ. ನಿರೂಪಿಸಿದರು. ಶಶಿಕಿರಣ್ ಭಟ್ ವಂದಿಸಿದರು.


