Sunday, June 7, 2026
HomeUncategorizedಬಂಟ್ವಾಳ; ಜಾನುವಾರು ಕಳವು ಹಾಗೂ ಅದರ ಅಂಗಾಗಗಳು ಪತ್ತೆ ಪ್ರಕರಣ ; ಮೂವರನ್ನು ಬಂಧಿಸಿದ ಪೊಲೀಸರು

ಬಂಟ್ವಾಳ; ಜಾನುವಾರು ಕಳವು ಹಾಗೂ ಅದರ ಅಂಗಾಗಗಳು ಪತ್ತೆ ಪ್ರಕರಣ ; ಮೂವರನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಬಂಟ್ವಾಳ; ಜಾನುವಾರು ಕಳವು ಹಾಗೂ ಅದರ ಅಂಗಾಗಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ದಿನಾಂಕ  14.08.2025 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತುಂಬೆ ಬಳಿ ಜಾನುವಾರು ಕಳವಾಗಿತ್ತು ಹಾಗೂ ಅದರ ಅಂಗಾಗಗಳು ಮರುದಿನ ದಿನಾಂಕ 15.08.2025 ರಂದು ಅಲ್ಲೇ ಸಮೀಪದಲ್ಲಿ ಪತ್ತೆಯಾಗಿತ್ತು. ಈ  ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34), 2.  ಮಂಗಳೂರು ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48),   ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಬಂಧಿತರು.

ಆರೋಪಿಗಳವನ್ನು ದಿನಾಂಕ 05.09.2025 ರಂದು ಬಂಧಿಸಲಾಗಿದೆ. ಆರೋಪಿಗಳ ವಿಚಾರಣೆಯ ವೇಳೆ ದಿನಾಂಕ: 04.09.2025 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲೂ ಆರೋಪಿಗಳಾಗಿರುವುದು ತಿಳಿದುಬಂದಿದ್ದು, ತನಿಖೆ ಪ್ರಗತಿಯಲ್ಲಿದೆ.

- Advertisement -

Latest News

error: Content is protected !!