Thursday, June 25, 2026
HomeUncategorizedಧರ್ಮಸ್ಥಳ; ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಮತ್ತು ಸೇವಾಭಾರತಿಯಿಂದ 2025 ರ...

ಧರ್ಮಸ್ಥಳ; ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಮತ್ತು ಸೇವಾಭಾರತಿಯಿಂದ 2025 ರ “ಸೇವಾ ಶ್ರೇಷ್ಠ” ಪುರಸ್ಕಾರ

- Advertisement -
- Advertisement -

ಧರ್ಮಸ್ಥಳ;  ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ ಹಾಗೂ ಮನೋರಂಜನಾ ಕಾರ್ಯಕ್ರಮದ ಉದ್ಘಾಟನ ಸಮಾರಂಭವು ಸಪ್ಟೆಂಬರ್ 05 ರಂದು ಸೌತಡ್ಕ ಬೆನ್ನುಹುರಿ ಅಪಘಾತಕ್ಕೊಳಗಾದ  ಕನ್ಯಾಡಿಯ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ ನಡೆಯಿತು. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಮತ್ತು ಪ್ರಗತಿಪರ ಕೃಷಿಕರಾದ ಶ್ರೀ ಮಾರ್ಷಲ್ ವೇಗಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಸೇವಾಧಾಮ ಸಂಸ್ಥಾಪಕರಾದ  ಶ್ರೀ ಕೆ ವಿನಾಯಕ ರಾವ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕೊಕ್ಕಡದಲ್ಲಿರುವ ಪುನಶ್ಚೇತನ ಕೇಂದ್ರ ರಾಜ್ಯಕ್ಕೆ ಮಾದರಿಯಾಗಿದೆ.  ಸಂಸ್ಥೆಯ ಸೇವಾಕಾರ್ಯಗಳ ನಿರಂತರತೆ ಮತ್ತು ಪಾರದರ್ಶಕತೆಯನ್ನು ಶ್ಲಾಘಿಸಿದರು.ಡಾ. ವೈಶಾಖ್ ಬಿ. ಭಟ್ ರವರು ಆರೋಗ್ಯ ಸೇವೆಯಲ್ಲಿ ಮಾಡಿದಂತಹ ಸೇವಾಕಾರ್ಯಗಳನ್ನು ಗುರುತಿಸಿ, ಸೇವಾಭಾರತಿ ಸಂಸ್ಥೆಯ ವತಿಯಿಂದ “ಸೇವಾ ಶ್ರೇಷ್ಠ -2025”  ಗೌರವವನ್ನು ನೀಡಿ ಸನ್ಮಾನಿಸಲಾಯಿತು.

ಬೆನ್ನುಹುರಿ ಅಪಘಾತಕ್ಕೊಳಗಾಗಿರುವ ಶ್ರೀ ಭವಾನಿ ಶಂಕರ್ ರವರು ಹತ್ತಿಯಿಂದ ಬತ್ತಿ ಮಾಡುವ ಯಂತ್ರದ ಮೂಲಕ ಸ್ವ- ಉದ್ಯೋಗವನ್ನು ಮಾಡಲು ಮುಂದಾಗಿದ್ದು ಇವರಿಗೆ ಸಂಸ್ಥೆಯ ಪರವಾಗಿ ಯಂತ್ರವನ್ನು ಹಸ್ತಾಂತರಿಸಲಾಯಿತು. ಮತ್ತು ಮಂಗಳೂರು KMC ಆಸ್ಪತ್ರೆಯ ಸ್ಪೈನ್ ಶಸ್ತ್ರಚಿಕಿತ್ಸಕರಾದ ಡಾ. ವೈಶಾಕ್ ಬಿ ಭಟ್ ರವರಿಂದ ಫಲಾನುಭವಿಗಳಿಗೆ ವೈದ್ಯರ ಸಮಲೋಚನೆಯನ್ನು ಮಾಡಿ ಫಲಾನುಭವಿಗಳಿಗೆ ಮನೋರಂಜನಾ ಕಾರ್ಯಕ್ರಮವನ್ನು ನಡೆಸಲಾಯಿತು..

ಈ ಸಂದರ್ಭದಲ್ಲಿ  Dattopant Tengadi Central board for Workers education and development  RAC ಮೆಂಬರ್ ಹಾಗೂ ನವಮಂಗಳೂರು ಬಂದರು ಮತ್ತು ಜನರಲ್ ನೌಕರರ ಅಸೋಸಿಯೇಷನ್ BMS ನ ಪ್ರಧಾನ ಕಾರ್ಯದರ್ಶಿ ಶ್ರೀ ವಿಘ್ನೇಶ್ ನಾಯ್ಕ್, ಫಾರ್ಮರ್ ಪ್ರೆಸಿಡೆಂಟ್ ಎಕ್ಸ್ ಸರ್ವಿಸ್ ಮೆನ್ಸ್ ಅಸೋಸಿಯೇಷನ್ ಬೆಳ್ತಂಗಡಿ (ರಿ.) ಮತ್ತು  ಪ್ರಧಾನರು ಹಿಡಿ ಅಕ್ಕಿಯೋಜನೆ ಉಜಿರೆ ಹವ್ಯಕ ವಲಯ ಶ್ರೀ ರಾಮಚಂದ್ರಪುರ ಮಠದ ಶ್ರೀ ಎಸ್ ಕೃಷ್ಣ ಭಟ್, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಕೆ ಕೃಷ್ಣ ಭಟ್, ದಿವ್ಯಂಗಾರ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಕು. ಅಂಜನಾ ದೇವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೇವಾಭಾರತಿ ಟ್ರಸ್ಟಿ ಶ್ರೀ ಜಯರಾಜ್ ಸಾಲಿಯನ್ ಕಾನರ್ಪ ಸ್ವಾಗತಿಸಿ, ಪೀರ್ ಟ್ರೈನರ್ ಶ್ರೀ ಅಂತೋಣಿ ಮತ್ತು ಡಾಕ್ಯುಮೆಂಟೇಶನ್ ಮೋನಿಟರಿಂಗ್ ಅಂಡ್ ಇವ್ಯಾಲುಯೇಶನ್ ಕಾರ್ಡಿನೇಟರ್ ಸುಮ ಕಾರ್ಯಕ್ರಮವನ್ನು ನಿರೂಪಿಸಿ, ಅನುಸರಣೆ ಮತ್ತು ಹಣಕಾಸು ವ್ಯವಸ್ಥಾಪಕ ಶ್ರೀ ಮೋಹನ್ ಎಸ್ ಧನ್ಯವಾದವಿತ್ತರು.

- Advertisement -

Latest News

error: Content is protected !!