Tuesday, July 14, 2026
Homeಕರಾವಳಿಮಂಗಳೂರುಮೂಡಬಿದರೆ; ಮಹಿಳೆಯಿಂದ ಚಿನ್ನಾಭರಣ ಪಡೆದು ವಂಚನೆ; ನೊಂದ ಮಹಿಳೆ ಆತ್ಮಹತ್ಯೆಗೆ ಶರಣು; ಆರೋಪಿ ಪರಾರಿ

ಮೂಡಬಿದರೆ; ಮಹಿಳೆಯಿಂದ ಚಿನ್ನಾಭರಣ ಪಡೆದು ವಂಚನೆ; ನೊಂದ ಮಹಿಳೆ ಆತ್ಮಹತ್ಯೆಗೆ ಶರಣು; ಆರೋಪಿ ಪರಾರಿ

- Advertisement -
- Advertisement -

ಮೂಡಬಿದರೆ; ಯುವಕನೊಬ್ಬ ಮಹಿಳೆಯಿಂದ ಚಿನ್ನಾಭರಣ ಪಡೆದು ವಂಚಿಸಿದ ಹಿನ್ನೆಲೆ ನೊಂದ ಮಹಿಳೆ ಆತ್ಮಹತ್ಯೆಗೆ ಶರಣಾದ ಘಟನೆ  ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ತೋಡಾರು ಗ್ರಾಮದ Air India ಎಂಬ ಹೆಸರಿನ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ಶಫ್ರೀನಾ ಬಾನು (31) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಅಪಾರ್ಟ್ಮೆಂಟ್ ನಿವಾಸಿ ನವಾಝ್ ರವರು ಕಳೆದ 14 ವರ್ಷಗಳ ಹಿಂದೆ ಶಫ್ರೀನಾ ಬಾನು (31 ವರ್ಷ) ಎಂಬುವರನ್ನು ಮದುವೆಯಾಗಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ.  ನವಾಝ್ ಹಾಗೂ ಅವರ ಪತ್ನಿಗೆ ಪರಿಚಯವಿರುವ ಆಟೋ ಚಾಲಕ ಪುತ್ರಿಗೆ ನಿವಾಸಿ ಅಶ್ರಫ್ ಎಂಬಾತನು ಕಳೆದ 7 ತಿಂಗಳ ಹಿಂದೆ ನವಾಝ್ ಪತ್ನಿಯಿಂದ ರೂ 2 ಲಕ್ಷ ನಗದು ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ಪಡೆದುಕೊಂಡಿದ್ದು, ಶಫೀನಾ ಬಾನು ರವರು ಆತನಲ್ಲಿ ಹಲವಾರು ಬಾರಿ ಕೇಳಿದರೂ ಆತನು ‘ಇವತ್ತು ಕೊಡುತ್ತೇನೆ-ನಾಳೆ ಕೊಡುತ್ತೇನೆ’ ಎಂದು ಹೇಳುತ್ತಾ  ಬಂದಿದ್ದ.  ದಿನಾಂಕ 26/08/2025 ರಂದು ಖಂಡಿತವಾಗಿಯೂ ಕೊಡುತ್ತೇನೆ ಎಂದು ಹೇಳಿದ್ದವನು ಆ ದಿನ, 06.00 ಗಂಟೆಗೆ ಶಫೀನಾ ಬಾನು ರವರ ಫೋನ್ ಗೆ ಕರೆ ಮಾಡಿ “ಒಂದೋ ನೀನು ನನಗೆ ಇನ್ನೂ ಕಾಲಾವಕಾಶಬೇಕು ಇಲ್ಲವಾದಲ್ಲಿ ನೀನು ನೀಡಿದ ಹಣ ಮತ್ತು ಒಡವೆಗೆ ಏನು ಫ್ರೂಫ್ ಇದೆ” ಎಂದು ಉಡಾಫೆಯಾಗಿ ಮಾತನಾಡಿದ್ದಾನೆ. ಇದರಿಂದ ನೊಂದ  ಶಫ್ರೀನಾ ಬಾನು ಬೆಳಗ್ಗೆ 7.00 ಗಂಟೆ ಯಿಂದ 07.45 ಗಂಟೆಯ ಮಧ್ಯಾವಧಿಯಲ್ಲಿ ಮನೆಯಲಿ ಯಾರೂ ಇಲ್ಲದ ಸಮಯ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮೃತ ಶಫೀನಾ ಬಾನು ರವರ ಪತಿ ನವಾಝ್ ರವರು ನೀಡಿದ ದೂರಿನಂತೆ ಅಶ್ರಫ್  ವಿರುದ್ಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ದುಪ್ರೇರಣೆ ಪ್ರಕರಣ ದಾಖಲಾಗಿದೆ. ಆದರೆ ಆರೋಪಿ ಅಶ್ರಫ್ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ

- Advertisement -

Latest News

error: Content is protected !!