Wednesday, June 24, 2026
Homeಕರಾವಳಿಬೆಳ್ತಂಗಡಿ : ವಿಚಾರಣೆಗೆ ಹಾಜರಾದ ಲಾಯರ್ ಜಗದೀಶ್

ಬೆಳ್ತಂಗಡಿ : ವಿಚಾರಣೆಗೆ ಹಾಜರಾದ ಲಾಯರ್ ಜಗದೀಶ್

- Advertisement -
- Advertisement -

ಬೆಳ್ತಂಗಡಿ : ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಬಗ್ಗೆ ಅವಹೇಳನ ಮಾಡಿ ವಿಡಿಯೋ ವೈರಲ್ ಮಾಡಿದ ಪ್ರಕರಣ ಸಂಬಂಧ ಲಾಯರ್ ಜಗದೀಶ್ ವಿಚಾರಣೆಗಾಗಿ ಆ.29 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಧರ್ಮಸ್ಥಳ ನಿವಾಸಿ ಪ್ರಭಾಕರ್ ಗೌಡ ಅವರು ಆ.13 ರಂದು ಲಾಯರ್ ಜಗದೀಶ್ ವಿರುದ್ಧ ದೂರು ನೀಡಿದ್ದರು.

ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಲು ಜೀವ ಭಯ ಕಾಡುತ್ತಿದ್ದು ಇದರಿಂದ ಪೊಲೀಸ್ ಭದ್ರತೆ ನೀಡಬೇಕಾಗಿ ವಿನಂತಿ ಮಾಡಿದ್ದ ಕಾರಣ ಇಬ್ಬರು ಪೊಲೀಸರ ಜೊತೆ 1:45 ಕ್ಕೆ ಲಾಯರ್ ಜಗದೀಶ್ ವಿಚಾರಣೆಗೆ ಹಾಜರಾಗಿದ್ದಾರೆ.

- Advertisement -

Latest News

error: Content is protected !!