Monday, August 31, 2026
Homeಕರಾವಳಿಉಡುಪಿಉಡುಪಿ: ರಸ್ತೆ ದಾಟಲು ನಿಂತಿದ್ದ ವೃದ್ದರೊಬ್ಬರಿಗೆ ಕಾರು ಡಿಕ್ಕಿ ; ಗಂಭೀರ ಗಾಯಗೊಂಡು ಸಾ*ವು

ಉಡುಪಿ: ರಸ್ತೆ ದಾಟಲು ನಿಂತಿದ್ದ ವೃದ್ದರೊಬ್ಬರಿಗೆ ಕಾರು ಡಿಕ್ಕಿ ; ಗಂಭೀರ ಗಾಯಗೊಂಡು ಸಾ*ವು

- Advertisement -
- Advertisement -

ಉಡುಪಿ: ರಸ್ತೆ ದಾಟಲು ನಿಂತಿದ್ದ ವೃದ್ದರೊಬ್ಬರಿಗೆ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಸಾ*ವನ್ನಪ್ಪಿರುವ ಘಟನೆ ಕಾಪು ಸಮೀಪದ ಕೊಪ್ಪಲಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.


ಕೊಪ್ಪಲಂಗಡಿಯ ಪೀರು ಸಾಹೇಬ್ (70) ಮೃತ ದುರ್ದೈವಿ. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಅತೀವೇಗದಿಂದ ಬಂದು ರಸ್ತೆ ದಾಟಲು ನಿಂತಿದ್ದ ಪೀರು ಸಾಹೇಬ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.  ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ

- Advertisement -

Latest News

error: Content is protected !!