Friday, June 5, 2026
HomeUncategorizedಮರದಿಂದ ಬಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಯುವಕನನ್ನು ಕೊಲೆಗೈದ ತೋಟದ ಮಾಲೀಕ

ಮರದಿಂದ ಬಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಯುವಕನನ್ನು ಕೊಲೆಗೈದ ತೋಟದ ಮಾಲೀಕ

- Advertisement -
- Advertisement -

ಚಿಕ್ಕಮಗಳೂರು; ಮರದಿಂದ ಬಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಯುವಕನನ್ನು ತೋಟದ ಮಾಲೀಕ ಕೊಲೆಗೈದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಕುಮಾರ್ (37) ಮೃತ ದುರ್ದೈವಿ. ಮಧು (37) ಕುಮಾರ್ ನನ್ನ ಕೊಂದ ಆರೋಪಿ.

ಕುಮಾರ್ ಮಧು ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗ್ತಿದ್ದ. ಹೀಗಾಗಿ ಈ ಹಿಂದೆ ಸಾಕಷ್ಟು ಬಾರಿ ಕುಮಾರ್ ಗೆ ಮಧು ಎಚ್ಚರಿಕೆ ನೀಡಿದ್ದ. ನಿನ್ನೆ ಕೂಡ ತೆಂಗಿನಕಾಯಿ ತೆಗೆದುಕೊಂಡು ಹೋಗುವಾಗ ಗಲಾಟೆಯಾಗಿದೆ. ಈ ವೇಳೆ ತೋಟದ ಮಾಲೀಕ ಮಧುಗೆ ಅವಾಚ್ಯ ಶಬ್ಧಗಳಿಂದ ಕುಮಾರ್ ನಿಂದಿಸಿದ್ದ. ಇದರಿಂದ ಆಕ್ರೋಶಗೊಂಡು ಗುದ್ದಲಿಯಿಂದ ಕುಮಾರ್ ಮೇಲೆ ಹಲ್ಲೆ ಮಾಡಿದ್ದಾನೆ ಮಧು. ಮದ್ಯ ಸೇವಿಸಿ ಊಟ-ತಿಂಡಿ ಮಾಡಿರದ ಕುಮಾರ್ ನಿತ್ರಾಣಗೊಂಡು ಅಲ್ಲೆ ಬಿದ್ದಿದ್ದನು. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದವನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ  ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಕುಮಾರ್ ಸಾವನ್ನಪ್ಪಿದ್ದಾನೆ. ಸಖರಾಯಪಟ್ಟಣ ಪೋಲಿಸರು ಕೊಲೆ ಆರೋಪಿ ಮಧುನನ್ನು ಬಂಧಿಸಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!