Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಕೆಎಸ್ ಆರ್ ಟಿಸಿ ಬಸ್ ಮುಂಭಾಗದ ಗಾಜಿಗೆ ಕಲ್ಲು ಎಸೆದ ಬೈಕ್ ಸವಾರ: ಧರ್ಮಸ್ಥಳ...

ಬೆಳ್ತಂಗಡಿ: ಕೆಎಸ್ ಆರ್ ಟಿಸಿ ಬಸ್ ಮುಂಭಾಗದ ಗಾಜಿಗೆ ಕಲ್ಲು ಎಸೆದ ಬೈಕ್ ಸವಾರ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ಕೆಎಸ್ ಆರ್ ಟಿಸಿ ಬಸ್ ಮುಂಭಾಗದ ಗಾಜಿಗೆ ಬೈಕ್ ಸವಾರ ಕಲ್ಲು ಎಸೆದ ಪರಿಣಾಮ ಗ್ಲಾಸ್ ಒಡೆದು ಹೋಗಿರುವ ಘಟನೆ ಧರ್ಮಸ್ಥಳ ಗ್ರಾಮದ ಪುದುವೆಟ್ಟು ಕ್ರಾಸ್ ಬಳಿ ನಡೆದಿದೆ. ಈ ಬಗ್ಗೆ ಕೆಎಸ್ ಆರ್ ಟಿಸಿ ಧರ್ಮಸ್ಥಳ ಘಟಕದಲ್ಲಿ ಸಂಚಾರ ನಿಯಂತ್ರಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಲಾಯಿಲ ನಿವಾಸಿ ಪಿ ದಾವೂದ್ ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದಿನಾಂಕ: 05.08.2025 ರಂದು ಮಧ್ಯಾಹ್ನದ ವೇಳೆ ಧರ್ಮಸ್ಥಳ ಡಿಪ್ಪೊದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕೆಎ-21ಎಫ್-0103 ನೇ ಸರಕಾರಿ ಬಸ್, ಬೆಳ್ತಂಗಡಿ ತಾಲೂಕು ತಲುಪಿದಾಗ, ಎದುರಿನಿಂದ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಬಂದ ಸವಾರನೋರ್ವ, ಬಸ್ಸಿನ ಮುಂಭಾಗದ ಗ್ಲಾಸಿಗೆ ಕಲ್ಲು ಹೊಡೆದು ಹೊಡೆದಿದ್ದಾನೆ. ಪರಿಣಾಮ ಗ್ಲಾಸ್ ಒಡೆದು ಸುಮಾರು 15,000/- ರೂ ನಷ್ಟವನ್ನುಂಟಾಗಿರೋದಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ದಾವೂದ್ ತಿಳಿಸಿದ್ದಾರೆ.

- Advertisement -

Latest News

error: Content is protected !!