- Advertisement -
![]()
- Advertisement -
ಕಾಸರಗೋಡು: ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಸಿಪಿಐ ಪಕ್ಷದ ಮುಖಂಡರಾಗಿದ್ದ ಎಂ. ನಾರಾಯಣನ್ (72) ಮಂಗಳವಾರ ಸಂಜೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಜಾಡಿಂಸ್ ರೋಗದಿಂದ ಬಳಲುತ್ತಿದ್ದ ಅವರು ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
- ಕಾಸರಗೋಡು ಜಿಲ್ಲೆಯಿಂದ ಶಾಸಕರಾಗಿ ಆಯ್ಕೆಗೊಂಡ ಅಪರೂಪದ ಹಿಂದುಳಿದ ಪರಿಶಿಷ್ಟ ವರ್ಗದ ನಾಯಕರುರಾಗಿದ್ದರು. ಅವರು ಉದ್ಯೋಗಕ್ಕೆ ರಾಜೀನಾಮೆ ನೀಡಿ ಎಡಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾಗಿದ್ದರು. 2014ರಿಂದ 2019ರ ತನಕ ಕಾಸರಗೋಡು ಜಿಲ್ಲಾ ಪಂಚಾಯತ್ ನ ಬೇಡಡ್ಕ ಡಿವಿಜನ್ ಸದಸ್ಯ, ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯ, ಕಾಞಂಗಾಡು ಮಂಡಲ ಕಾರ್ಯದರ್ಶಿ, ಕರ್ಷಕ ತೊಯಿಲಾಳಿ ಫೆಡರೇಷನ್ ಕೇರಳ ರಾಜ್ಯ ಕಾರ್ಯದರ್ಶಿ, ಆದಿವಾಸಿ ಮಹಾಸಭಾ ರಾಜ್ಯದ ಕಾರ್ಯದರ್ಶಿಯಾಗಿ ದುಡಿದಿದ್ದರು.
- Advertisement -


