Wednesday, June 3, 2026
Homeತಾಜಾ ಸುದ್ದಿಉತ್ತರಾಖಂಡ್‌ನಲ್ಲಿ ಭೀಕರ ಮೇಘಸ್ಫೋಟ; 60ಕ್ಕೂ ಹೆಚ್ಚು ಮಂದಿ ನಾಪತ್ತೆ

ಉತ್ತರಾಖಂಡ್‌ನಲ್ಲಿ ಭೀಕರ ಮೇಘಸ್ಫೋಟ; 60ಕ್ಕೂ ಹೆಚ್ಚು ಮಂದಿ ನಾಪತ್ತೆ

- Advertisement -
- Advertisement -

ಉತ್ತರಾಖಂಡ್: ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ ಸಂಭವಿಸಿದ ಪರಿಣಾಮವಾಗಿ ಪ್ರವಾಹ ಹಾಗೂ ಗುಡ್ಡ ಕುಸಿದಿದ್ದು, ಮನೆಗಳು ಸೇರಿದಂತೆ 60ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಖಿರ್‌ ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ಧರಾಲಿ ಮಾರುಕಟ್ಟೆ ಪ್ರದೇಶದಲ್ಲಿ ಹಾನಿಯಾಗಿದೆ. ಬೆಟ್ಟದಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಹರಿದು ಬಂದ ಹಿನ್ನೆಲೆಯಲ್ಲಿ ತರಗೆಲೆಯಂತೆ ಮನೆಗಳು ಕೊಚ್ಚಿಹೋಗಿವೆ. ಮೇಘಸ್ಫೋಟದ ದೃಶ್ಯ ಸ್ಥಳೀಯರ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳದಲ್ಲಿ ಎಸ್‌ಡಿಆರ್‌ಎಫ್‌ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಸರ್ಕಾರವು ಭಾರತೀಯ ಸೇನೆಯ ಸಹಾಯವನ್ನು ಸಹ ಪಡೆದುಕೊಂಡಿದೆ.

- Advertisement -

Latest News

error: Content is protected !!