Saturday, June 6, 2026
Homeಕೊಡಗುಕೊಡಗಿನ ಆನೆಕಾಡು ಎಂಬಲ್ಲಿ ಭೀಕರ ಅಪಘಾತ; ಬೆಳ್ಳಾರೆಯ ಪೆರುವಾಜೆಯ ಯುವಕ ಸಾವು

ಕೊಡಗಿನ ಆನೆಕಾಡು ಎಂಬಲ್ಲಿ ಭೀಕರ ಅಪಘಾತ; ಬೆಳ್ಳಾರೆಯ ಪೆರುವಾಜೆಯ ಯುವಕ ಸಾವು

- Advertisement -
- Advertisement -

ಮಡಿಕೇರಿ; ಕುಶಾಲನಗರ ಸಮೀಪದ ಆನೆಕಾಡು ಎಂಬಲ್ಲಿ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೆಳ್ಳಾರೆಯ ಪೆರುವಾಜೆಯ ಯುವಕ ಸಾವನ್ನಪ್ಪಿದ್ದಾನೆ.

ಪೆರುವಾಜೆಯ ಅರ್ನಾಡಿಯ ವಿಷ್ಣು ಭಟ್ ಎಂಬವರ ಪುತ್ರ ಕಾರ್ತಿಕ್ ಮೃತ ಯುವಕ. ಮಡಿಕೇರಿಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಕಾರು ಕಾರ್ತಿಕ್ ಬೈಕ್ ಗೆ ಡಿಕ್ಕಿಯಾಗಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ತಿಕ್ ಮೈಸೂರಿನಲ್ಲಿ ಇನ್ಫೋಸಿಸ್ ನಲ್ಲಿ ಉದ್ಯೋಗಿಯಾಗಿದ್ದಾರೆ. ಅವರು ಬೆಳ್ಳಾರೆಯ ಪೆರುವಾಜೆಯಲ್ಲಿರುವ ಅವರ ಮನೆಗೆ ತೆರಳುತ್ತಿದ್ದಾಗ ಅಪಘಾತವಾಗಿದೆ.

- Advertisement -

Latest News

error: Content is protected !!