- Advertisement -
![]()
- Advertisement -
ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ತಪ್ಪೊಪ್ಪಿಗೆ ಪ್ರಕರಣದ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಂಹತಿ ಇಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದಾರೆ.
ಸದಾಶಿವನಗರದ ಪರಮೇಶ್ವರ್ ಖಾಸಗಿ ನಿವಾಸದಲ್ಲಿ ಭೇಟಿ ಮಾಡಿದ ಮೊಹಂತಿ, ನಿನ್ನೆ ಧರ್ಮಸ್ಥಳದಲ್ಲಿ ಅನಾಮಿಕ ದೂರುದಾರ ಗುರುತಿಸಿದ್ದ ಸ್ಥಳದಲ್ಲಿ ಸಿಕ್ಕಿದ್ದ ಮಾನವ ಮೂಳೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ
ಮತ್ತೊಂದೆಡೆ ಇತ್ತ ಕೇಂದ್ರ ಸೇವಾ ಪಟ್ಟಿಯಲ್ಲಿ ಕೂಡಾ ಪ್ರಣಬ್ ಮೊಹಾಂತಿ ಹೆಸರು ಇದ್ದು, ರಾಜ್ಯ ಸೇವೆಯಲ್ಲಿಯೇ ಮುಂದುವರಿಯುತ್ತಾರೋ ಅಥವಾ ಕೇಂದ್ರ ಸೇವೆಗೆ ತೆರಳುತ್ತಾರೋ ಎಂಬ ಬಗ್ಗೆಯೂ ಇನ್ನೂ ಚರ್ಚೆಗಳಿವೆ
ಹೀಗಾಗಿ ಇಂದು ವಿಶೇಷ ತನಿಖಾ ತಂಡದ ಮುಖ್ಯಸ್ಥ ಪ್ರಣಬ್ ಮೊಹಂತಿ ಗೃಹ ಸಚಿವರನ್ನು ಭೇಟಿ ಮಾಡಿರುವುದು ಮಹತ್ವವನ್ನು ಪಡೆದುಕೊಂಡಿದೆ.
- Advertisement -


