Wednesday, June 24, 2026
Homeಕರಾವಳಿನೆಲ್ಯಾಡಿ; ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಹಾಗೂ ಕೋಡ್ ಕ್ರಾಫ್ಟ್ ಟೆಕ್ನಾಲಜಿ ವತಿಯಿಂದ ಶಾಲಾ ಹಂತದ ವಿಜ್ಞಾನ...

ನೆಲ್ಯಾಡಿ; ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಹಾಗೂ ಕೋಡ್ ಕ್ರಾಫ್ಟ್ ಟೆಕ್ನಾಲಜಿ ವತಿಯಿಂದ ಶಾಲಾ ಹಂತದ ವಿಜ್ಞಾನ ಕಾರ್ಯರೂಪ ಮಾದರಿ ಸ್ಪರ್ಧೆ

- Advertisement -
- Advertisement -

ನೆಲ್ಯಾಡಿ;  ಶ್ರೀ ರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ ಇಂದು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಹಾಗೂ ಕೋಡ್ ಕ್ರಾಫ್ಟ್ ಟೆಕ್ನಾಲಜಿ ವತಿಯಿಂದ ಶಾಲಾ ಹಂತದ ವಿಜ್ಞಾನ ಕಾರ್ಯರೂಪ ಮಾದರಿ ಸ್ಪರ್ಧೆ ಏರ್ಪಡಿಸಲಾಯಿತು. ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳನ್ನು ಗುರುತಿಸಿ ಉತ್ತಮ ವೇದಿಕೆಯನ್ನು ಮಕ್ಕಳಿಗೆ ಕಲ್ಪಿಸುವ ಸದುದ್ದೇಶ ಹೊಂದಿದೆ. ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಕು|ಅನನ್ಯ ಹಾಗೂ ಕು|ನಿಧಿಶಾ ತೀರ್ಪುಗಾರರಾಗಿ ಆಗಮಿಸಿದರು. ಸುಮಾರು ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಅದರಲ್ಲಿ ಆರು ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಗೆ ಆಯ್ಕೆಗೊಂಡರು.

ಪ್ರೌಢ ವಿಭಾಗದಲ್ಲಿ ಆದಿತ್ಯ.ಆರ್, ಹಿತೇಶ್,  ವಚನ್  ಹಾಗೂ ಪ್ರಾಥಮಿಕ ವಿಭಾಗದಲ್ಲಿ  ಲಿಖಿತ್, ಹರ್ಷಿತ್ ಮತ್ತು ಯಶ್ವಿನ್, ಶ್ರೀ ವಲ್ಲಭ. ಕು|ಅನನ್ಯ ಇವರು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ  ಕುರಿತು ವಿವರಿಸಿದರು. ಶಾಲಾ ಮುಖ್ಯ ಗುರುಗಳು ಶ್ರೀ ಗಣೇಶ್ ವಾಗ್ಲೆ ಸ್ವಾಗತಿಸಿದರು, ಶ್ರೀಮತಿ ಯಶಸ್ವಿನಿ ವಿಜೇತರ ಪಟ್ಟಿ ವಾಚಿಸಿದರು, ಶ್ರೀಮತಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಕಾವ್ಯ ವಂದಿಸಿದರು.

- Advertisement -

Latest News

error: Content is protected !!