ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೇಗಾಂವ್ ನಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳು ಖುಲಾಸೆಗೊಂಡಿದ್ದಾರೆ.ಸಾಧ್ವಿ ಪ್ರಜ್ಞಾ ಠಾಕೂರ್, ಕರ್ನಲ್ ಪುರೋಹಿತ್ ಸೇರಿದಂತೆ ಏಳು ಆರೋಪಗಳನ್ನು ಖುಲಾಸೆಗೊಳಿಸಿ ಮುಂಬೈನ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಸಾಕ್ಷ್ಯಗಳ ಕೊರತೆ ಮತ್ತು ಫೋರೆನ್ಸಿಕ್ ವರದಿಗಳು ನಿರ್ಣಾಯಕವಲ್ಲ ಎಂದಿರುವ ಕೋರ್ಟ್, ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಸ್ಫೋಟಕ್ಕೆ ಬಳಸಿದ ಮೋಟಾರ್ ಸೈಕಲ್ ಪ್ರಜ್ಞಾ ಸಿಂಗ್ ಠಾಕೂರ್ ಬಳಿ ಇತ್ತು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಮತ್ತು ಕರ್ನಲ್ ಪುರೋಹಿತ್ ನಿವಾಸದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿದ್ದರು ಎಂಬುದನ್ನು ಸಾಬಿತುಪಡಿಸಲಾಗಿಲ್ಲ ಎಂದು ಕೂಡಾ ಎನ್ಐಎ ಕೋರ್ಟ್ ಅಭಿಪ್ರಾಯಪಟ್ಟಿದೆ.
2008ರ ಮಾಲೇಗಾಂವ್ ನಲ್ಲಿ ಸಂಭವಿಸಿದ್ದ ಮೋಟಾರ್ ಸೈಕಲ್ ನಲ್ಲಿ ಇರಿಸಿದ್ದ ಬಾಂಬ್ ಸ್ಫೋಟದಲ್ಲಿ ಆರು ಜನ ಮೃತಪಟ್ಟು 101 ಜನರು ಗಾಯಗೊಂಡಿದ್ದರು.


