- Advertisement -
![]()
- Advertisement -
ಮಂಡ್ಯ: ಸೀರೆಗಾಗಿ ಮಹಿಳೆಯರು ಅಂಗಡಿಯಲ್ಲಿ ಮುಗಿಬಿದ್ದ ಕಾರಣ ನಿಭಾಯಿಸಲು ಸಾಧ್ಯವಾಗದೇ ಮಾಲೀಕ ಅಂಗಡಿ ಬಂದ್ ಮಾಡಿದ ಘಟನೆ ಮಂಡ್ಯದಲ್ಲಿ ಇಂದು ನಡೆದಿದೆ.
ಮಂಡ್ಯ ನಗರದ ವಿವಿ ರಸ್ತೆಯಲ್ಲಿರುವ ಸೆಂಥಿಲ್ ಕುಮಾರ್ ಟೆಕ್ಸ್ ಟೈಲ್ಸ್ ಎಂಬ ಜವಳಿ ಅಂಗಡಿಯಲ್ಲಿ 500 ರೂಪಾಯಿಗೆ ನಾಲ್ಕು ಸೀರೆಗಳ ಆಫರ್ ಘೋಷಿಸಲಾಗಿತ್ತು.
ಆಫರ್ ಹಿನ್ನೆಲೆಯಲ್ಲಿ ಸೀರೆ ಖರೀದಿಸಲು ನೂರಾರು ಮಹಿಳೆಯರು ಅಂಗಡಿಯಲ್ಲಿ ಜಮಾಯಿಸಿದ್ದರು. ಜನ ಸಾಗರ ಕಂಡು ಅಂಗಡಿ ಬಾಗಿಲು ಮುಚ್ಚಿದ್ದಾರೆ.
ಅಂಗಡಿಯ ಉದ್ಘಾಟನೆ ಹಿನ್ನೆಲೆಯಲ್ಲಿ ಮಾಲೀಕ ಆಫರ್ ಘೋಷಣೆ ಮಾಡಿದ್ದರು. ಆದರೆ ಸೀರೆ ವಿತರಿಸಲಾಗದೇ ಕಂಗಾಲಾದ ಬಟ್ಟೆ ಅಂಗಡಿ ಮಾಲೀಕ ಕೊನೆಗೆ ಪೊಲೀಸರನ್ನು ಕರೆಸಿಕೊಂಡು ಅಂಗಡಿ ಬಾಗಿಲು ಮುಚ್ಚಿದ್ದಾರೆ.
- Advertisement -


