Saturday, June 6, 2026
Homeಅಪರಾಧಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಹೋಲೋ ಬ್ಲಾಕ್ ಶೆಡ್‌ ನಿರ್ಮಾಣ; ಮೆಸ್ಕಾಂ, ಗ್ರಾಮ ಪಂಚಾಯತ್‌ ಅಧಿಕಾರಿಗಳಿಂದ ದಿಢೀರ್‌...

ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಹೋಲೋ ಬ್ಲಾಕ್ ಶೆಡ್‌ ನಿರ್ಮಾಣ; ಮೆಸ್ಕಾಂ, ಗ್ರಾಮ ಪಂಚಾಯತ್‌ ಅಧಿಕಾರಿಗಳಿಂದ ದಿಢೀರ್‌ ಕಾರ್ಯಾಚರಣೆ

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕಿನ ಕೊಳ್ಳಾಡು ಗ್ರಾಮದ ಸಾಲೆತ್ತೂರು ಅಗರಿಯ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಶೆಡ್‌ ನಿರ್ಮಿಸಿ, ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದು ಕಾರ್ಯನಿರ್ವಹಿಸುತ್ತಿದ್ದ ಕಂಪೆನಿಯೊಂದರ ಮೇಲೆ ಕಂದಾಯ, ಮೆಸ್ಕಾಂ ಮತ್ತು ಗ್ರಾಮ ಪಂಚಾಯತ್‌ ಅಧಿಕಾರಿಗಳು ಜಂಟಿಯಾಗಿ ದಿಢೀರ್‌ ಕಾರ್ಯಾಚರಣೆ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿಗಳು ಕೊಳ್ಳಾಡು ಗ್ರಾಮ ಸಾಲೆತ್ತೂರು ಅಗರಿಯ ಸರ್ವೇ ಸಂಖ್ಯೆ 512/6ರ ಸರ್ಕಾರಿ ಜಮೀನಿನಲ್ಲಿ ಕಳೆದ ಎಂಟು ವರ್ಷಗಳಿಂದ ಯಾವುದೇ ದಾಖಲೆಗಳನ್ನು ಕೂಡ ನೀಡದೆ ಕರಾಯಿ ಅಬ್ದುಲ್‌ ಕರೀಂ ಶೆಡ್‌ ನಿರ್ಮಿಸಿ ಹೋಲೋ ಬ್ಲಾಕ್‌ ತಯಾರಿಸುತ್ತಿದ್ದ ಶೆಡ್ ಮೇಲೆ  ದಾಳಿ ನಡೆಸಿದ್ದಾರೆ.

ಈ ಜಂಟಿ ಕಾರ್ಯಾಚರಣೆಯು ಮಂಗಳೂರು ಸಹಾಯಕ ಆಯುಕ್ತರ ಸೂಚನೆಯಂತೆ ವಿಟ್ಲ ಹೋಬಳಿಯ ಕಂದಾಯ ನಿರೀಕ್ಷಕ ರವಿ ಎಂ.ಎನ್‌, ಕೊಲ್ನಾಡು ಗ್ರಾಮ ಆಡಳಿತಾಧಿಕಾರಿ ಕರಿ ಬಸಪ್ಪ, ಪಿಡಿಒ ಲಾವಣ್ಯ ಮತ್ತು ಇತರ ಸಿಬ್ಬಂದಿಗಳ ನೇತೃತ್ವದಲ್ಲಿ ನಡೆಯಿತು. ಕರಾಯಿ ಖಾಲಿದ್‌ ಎನ್ನುವವರು ಈ ಬಗ್ಗೆ ದೂರು ನೀಡಿದ್ದರು. ಇನ್ನು ಕರಾಯಿ ಅಬ್ದುಲ್‌ ಕರೀಂ ಅವರಲ್ಲಿ ಯಾವುದೇ ದಾಖಲೆಗಳು ಇಲ್ಲದಿದ್ದರೂ ಮೆಸ್ಕಾಂ ಅಧಿಕಾರಿಗಳು ತಾತ್ಕಲಿಕವಾಗಿ ವಿದ್ಯುತ್‌ ಸಂಪರ್ಕ ನೀಡಿರುವುದು ಕೂಡ ಬಯಲಾಗಿದೆ. 

- Advertisement -

Latest News

error: Content is protected !!