- Advertisement -
![]()
- Advertisement -
ರಾಯಚೂರು: ಹುಟ್ಟುಹಬ್ಬ ಆಚರಣೆ ವೇಳೆ ನವಿಲು ಗರಿಯ ಹಾರ ಹಾಕಿಸಿಕೊಂಡ ಮಾಜಿ ಸಚಿವರೊಬ್ಬರಿಗೆ ಈಗ ಸಂಕಷ್ಟ ಎದುರಾಗಿದೆ.ಜುಲೈ 14 ರಂದು ನಡೆದಿದ್ದ ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಮಾಜಿ ಶಾಸಕ ಮತ್ತು ಮಾಜಿ ಸಚಿವ ಕೆ. ಶಿವನಗೌಡ ನಾಯಕ್ ನವಿಲುಗರಿಯ ಹಾರ ಹಾಕಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಎಂಬವರು ವನ್ಯ ಜೀವಿಗಳ ಸಂರಕ್ಷಣಾ ಕಾಯ್ದೆ 1972 ರ ಉಲ್ಲಂಘನೆ ಆರೋಪದಡಿ ಶಿವನಗೌಡ ನಾಯಕ್ ವಿರುದ್ಧ ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನವಿಲು ಗರಿಯ ಹಾರದ ಬಗ್ಗೆ ಶಿವನಗೌಡ ನಾಯಕ್ ಅವರಿಂದ ಮಾಹಿತಿ ಕೇಳಿದ್ದು, ಹಾರವನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲು ಮಾಜಿ ಸಚಿವ ಶಿವನಗೌಡ ನಾಯಕ್ ಮುಂದಾಗಿದ್ದಾರೆ.
- Advertisement -


